
ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನ ಮಹದೇಶ್ವರಪುರದಲ್ಲಿ ಕುಲ್ಲಕ ಕಾರಣಕ್ಕೆ ಜೋಡಿ ಕೊಲೆಯಾಗಿದೆ. ಅದೇ ಗ್ರಾಮದ ರೌಡಿಶೀಟರ್ ಕೃಷ್ಣ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ. ಮೃತರನ್ನು ಕೋಳಿ ಸುರೇಶ್ (40) ಹಾಗೂ ನಾಗರಾಜು (45) ಎಂದು ಗುರುತಿಸಲಾಗಿದೆ.
ನಿನ್ನೆ ರಾತ್ರಿ ಮಹದೇಶ್ವರಪುರದ ಹೋಟೆಲ್ ಬಳಿ ಟೀ ಕುಡಿಯುವಾಗ ಮಾತಿಗೆ ಮಾತು ಬೆಳೆದು ಘಟನೆ ನಡೆದಿದೆ ಎನ್ನಲಾಗಿದೆ. ಕೊಲೆ ಮಾಡಿದ ನಂತರ ಆರೋಪಿ ಕೃಷ್ಣ ನೇರವಾಗಿ ಮೇಲುಕೋಟೆ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಆಗಮಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಎರಡು ಮೃತದೇಹಗಳನ್ನು ಪಾಂಡವಪುರ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಶವಪರೀಕ್ಷೆ ನಡೆಸಲಾಗಿದೆ.
ಕೊಲೆ ಹಿಂದಿತ್ತಾ ಲವ್?
ಟೀ ಕುಡಿಯುವಾಗ ಮಾತಿಗೆ ಮಾತು ಬೆಳೆದು ಜೋಡಿ ಕೊಲೆಯಾಗಿದೆ ಎನ್ನಲಾಗುತ್ತಿದೆ. ಆದರೆ, ಈ ಕೊಲೆಗಳ ಹಿಂದೆ ಪ್ರೇಮ ಪ್ರಕರಣ ವಾಸನೆ ಪೊಲೀಸರಿಗೆ ಬಡಿಯುತ್ತಿದೆ. ಇದರ ಜೊತೆ ಹಣಕಾಸಿನ ವಿಚಾರವಾಗಿಯೂ ಜಗಳವಾಗಿದ್ದು, ಅದೇ ಜಗಳ ಕೊಲೆಗೆ ತಿರುಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಬಿಗುವಿನ ವಾತಾವರಣ
ಜೋಡಿ ಕೊಲೆಯಿಂದ ಮಹದೇಶ್ವರಪುರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪರಿಸ್ಥಿತಿ ತಿಳಿಗೊಳಿಸಲು ಶ್ರಮಿಸುತ್ತಿರುವ ಪೊಲೀಸರು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.
Comments are closed.