
ನಾಗ್ಪುರ: ಮಹಾರಾಷ್ಟ್ರದ ಉದಯೋನ್ಮುಖ ಬಾಕ್ಸರ್‌ವೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
19 ವರ್ಷದ ನಾಗ್ಪುರದ ಬಾಕ್ಸರ್ ಅಕೋಲದಲ್ಲಿನ ಹಾಸ್ಟೇಲ್ ಕೊಠಡಿಯೊಳಗೆ ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವವರನ್ನು ಪ್ರಣವ್ ರಾವತ್ ಎಂದು ಗುರುತಿಸಲಾಗಿದೆ.
“ಗುರುವಾರ ಅನಾರೋಗ್ಯದ ನೆಪವೊಡ್ಡಿ ತರಬೇತಿಗೆ ಬಂದಿರಲಿಲ್ಲ. ಶುಕ್ರವಾರ ಪ್ರಣವ್ ಬಾಕ್ಸಿಂಗ್ ಕೂಟವೊಂದರಲ್ಲಿ ಪಾಲ್ಗೊಳ್ಳಬೇಕಿತ್ತು. ಅಷ್ಟರೊಳಗೆ ಆತ್ಮಹತ್ಯೆ ಮಾಡಿಕೊಂಡಿರುವುದು ದುರದೃಷ್ಟಕರ’ ಎಂದು ಕೋಚ್ ಸತೀಶ್ಚಂದ್ರ ತಿಳಿಸಿದ್ದಾರೆ.
ಪ್ರಣವ್ ವರ್ಷದ ಆರಂಭದಲ್ಲಿ ದಿಲ್ಲಿಯಲ್ಲಿ ನಡೆದಿದ್ದ ರಾಷ್ಟ್ರೀಯ ಬಾಕ್ಸಿಂಗ್ ಕೂಟದಲ್ಲಿ ಮಹಾರಾಷ್ಟ್ರವನ್ನು ಪ್ರತಿನಿಧಿಸಿದ್ದರು.
Comments are closed.