ಕರಾವಳಿ

ಗರ್ಭಿಣಿಯರು ಹಾಗೂ ಸ್ತನ್ಯಪಾನ ಮಾಡಿಸುವ ಸ್ತ್ರೀಯರು ಈ ಕಾಯಿಯನ್ನು ಬಳಸುವಂತಿಲ್ಲ

Pinterest LinkedIn Tumblr

ಈ ಮರದ ಕಾಯಿಗಳನ್ನು ಶಾಂಪೂವಿನಂತೆ ಬಳಸಬಹುದು. ಮೂಲತಹ ಉತ್ತರ ಭಾರತದಲ್ಲಿ ಹೆಚ್ಚಾಗಿ ಕಾಣಸಿಗುವ ಅಂಟುವಾಳ ಇತ್ತೀಚಿನ ದಿನಗಳಲ್ಲಿ ದಕ್ಷಿಣದಲ್ಲಿ ಎಥೇಚ್ಛವಾಗಿ ಕಾಣಬಹುದಾದ ವೃಕ್ಷವಾಗಿದೆ. ಸಪಿಂಟೆಸಿಯೇ ಕುಟುಂಬಕ್ಕೆ ಸೇರಿದ ಅಂಟುವಾಳದ ವೈಜ್ಞಾನಿಕ ಹೆಸರನ್ನು ಕೆಲವರು ಸಪಿಂಟಿಸ್ ಟ್ರೈಪೋಲಿಯೇಟಸ್ ಎಂದರೆ ಮತ್ತೆ ಕೆಲವರು ಸಪಿಂಟಿಸ್ ಲ್ಯಾರಿಪೋನಿಯ ಎಂದು ಮತ್ತೆ ಕೆಲವರು ಸಪಿಂಟಿಸ್ ಮುಖರೋಸಿ ಎಂದಿದ್ದಾರೆ ಸಂಸ್ಕ್ರುತದಲ್ಲಿ ರಿಟಕರಂಜಾ ಗುಚ್ಛಪುಷ್ಪಕ ಸಾರಿಸ್ಟಾ ಕುಂಬಬೀಜ ಇತ್ಯಾದಿ ಹೆಸರು ಗಳಿರುವ ಈ ಮರವನ್ನು ಕನ್ನಡದಲ್ಲಿ ಅಂಟುವಾಳ ನೊರೆಕಾಯಿ ತೊಗಟೆಮರ ಅಂಟಳಕಾಯಿ ಇತ್ಯಾದಿ ಹೆಸರುಗಳಿದ್ದರೆ ಆಂಗ್ಲಭಾಷೆಯಲ್ಲಿ ಸೋಪನಟ್ ಸೋಪ್ ಬೇರಿ ಚೈನೀಸ್ ಸೋಪ್ ಬೆರಿ ಸೋಪ್ ನಟ್ ಟ್ರಿ ವಾಷ್ ನಟ್ ಸೌತ್ ಇಂಡಿಯನ್ ಸೋಪ್ ನಟ್ ಟ್ರಿಲೀವ್ ಸೋಪ್ ಬೇರಿ ಇತ್ಯಾದಿ ಹೆಸರುಗಳಿವೆ.

ಅಂಟುವಾಳದ ಮೂಲ ಉತ್ತರ ಭಾರತ ಹಾಗೂ ಚೀನಾ ಆಗಿದ್ದು ಭಾರತ ಚೀನಾ ಸೇರಿದಂತೆ ನೇಪಾಳ ಅಮೆರಿಕ ಮುಂತಾದ ರಾಷ್ಟ್ರಗಳಲ್ಲಿ ಕಾಣಸಿಗುವ ಉಷ್ಣವಾಷಿ ವೃಕ್ಷವಾಗಿದೆ. ಸುಮಾರು 25 ರಿಂದ 30 ಅಡಿ ಎತ್ತರಕ್ಕೆ ಬೆಳೆಯಬಲ್ಲ ಮಾಸಲು ಬಿಳಿಬಣ್ಣದ ತೊಗಟೆಯಿಂದ ಕುಡಿದ ಹಲವಾರು ಕವಲುಗಳಾಗಿ ಬೆಳೆಯುವ ವೃಕ್ಷವಾಗಿದೆ. ಸುಮಾರು 15 ಸೆಂಟಿಮೀಟರ್ ಉದ್ದ ಹಾಗೂ 7 ಸೆಂಟಿಮೀಟರ್ ಅಗಲವಾದ ನೀಳವಾದ ಘಾಡ ಹಸಿರುಬಣ್ಣದ ಒರಟಾದ ಎಲೆಗಳು ಪರ್ಯಾಯ ಮಾದರಿಯಲ್ಲಿ ಜೋಡನೆಗೊಂಡಿದ್ದು ಆಕ್ಟೊಬರ್ ಹಾಗೂ ನವಂಬರ್ ತಿಂಗಳಲ್ಲಿ ಪುಟ್ಟ ಪುಟ್ಟದಾದ ಹೂವುಗಳು ಗೊಂಚಲುಗಳಲ್ಲಿ ಸಮಾವೇಶಗೊಂಡಿರುತ್ತವೆ. ಫೆಬ್ರವರಿ ಹಾಗೂ ಮೇ ತಿಂಗಳ ಅವಧಿಯಲ್ಲಿ ಕಾಯಿಗಳಿರುತ್ತವೆ. ಈ ಕಾಯಿಗಳು ಒಣಗಿದ ಮೇಲೆ ಕಪ್ಪು ಬಣ್ಣಕ್ಕೆ ತಿರುಗುತ್ತವೆ ಹಾಗೂ ಗಟ್ಟಿಯಾಗುತ್ತವೆ. ಸ್ಯಾಪೋನಿನ್ಸ್ ಅಪರಾಚಿಟಿಕ್ ಬೆಹನಿಕ್ ಲಿನೊಲಿಯಿಕ್ ಅಲಿಯಿಕ್ ಪಾಲ್ಮೆಟಿಕ್ ಸ್ಟಿಯರಿಕ್ ಹಾಗೂ ಸಪಿಂಟಿಕ್ ಆಸಿಡ್ ಗ್ಲೈಕೋಸೈಡ್ಸ್ ಇತ್ಯಾದಿ ರಾಸಾಯನಿಕ ಸಂಯುಕ್ತಗಳಿಂದ ಕೂಡಿರುವ ಈ ವೃಕ್ಷವನ್ನು ಸಾಂಪ್ರದಾಯಿಕ ಆಯುರ್ವೇದ ಸಿಧ್ದ ಹಾಗೂ ಯುನಾನಿ ಚಿಕಿತ್ಸಾ ಪದ್ಧತಿಗಳಲ್ಲಿ ಈ ಮರದ ಕಾಯಿ ತೊಗಟೆ ಹಾಗೂ ಬೇರುಗಳನ್ನು ಬಳಸಲಾಗುತ್ತದೆ.

ಮೂಲತಹ ವಾಣಿಜ್ಯ ಬೆಳೆಯ ವೃಕ್ಷವಾಗಿರುವ ಅಂಟುವಾಳವನ್ನು ಆಭರಣಗಳನ್ನು ತೊಳೆಯಲು ಬಟ್ಟೆಗಳನ್ನು ತೊಳೆಯಲು ಹಾಗೂ ಸೌಂದರ್ಯ ವರ್ಧಕ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ ಆದರೂ ಔಷಧಿ ಉದ್ದೇಶಗಳಿಗೂ ಸಹ ಬಳಸಲಾಗುತ್ತದೆ. ಅಂಟುವಾಳದ ಸಾಮಾನ್ಯ ಉಪಯೋಗವೆಂದರೆ ಅಂಟುವಾಳದ ಕಾಯಿಗಳನ್ನು ಒಣಗಿಸಿ ಪುಡಿಮಾಡಿಕೊಂಡು ಶಾಂಪೂವಿನಂತೆ ತಲೆಕೂದಲಿಗೆ ಹಚ್ಚಿಕೊಂಡು ಸ್ನಾನ ಮಾಡುವುದರಿಂದ ಕೂದಲು ಘನವಾಗಿಯೂ ಕೋಮಲವಾಗಿಯೂ ಬೆಳೆಯುತ್ತವೆ. ಕೂದಲು ಉದುರುವಿಕೆಯು ಸಹ ನಿಲ್ಲುತ್ತದೆ. ಅಂಟುವಾಳದ ಪುಡಿಯನ್ನು ಮುಖ ತೊಳೆಯುವ ಹಾಗೂ ಕೈ ತೊಳೆಯುವ ಉತ್ಪನ್ನಗಳಲ್ಲಿಯೂ ಬಳಸಲಾಗುತ್ತದೆ. ಚೇಳು ಜೀರಿ ಅಥವಾ ಯಾವುದೇ ಕೀಟಗಳು ಕಚ್ಚಿದಾಗ ಅಂಟುವಾಳದ ಕಾಯಿಗಳನ್ನು ಅರೆದು ಅದರ ಗಂಧವನ್ನು ಲೇಪಿಸಿದರೆ ನೋವು ಕಡಿಮೆಯಾಗುತ್ತದೆ.

ವಿಷದ ಪ್ರಭಾವವು ಸಹ ಬೇಗನೆ ಇಳಿಮುಖವಾಗುತ್ತದೆ. ಈ ಕಾಯಿಗಳನ್ನು ಅರೆದು ಗಂಡಮಾಲೆ ಹಾಗೂ ಕುಷ್ಠರೋಗಗಳಿಗೂ ಸಹ ಲೇಪಿಸಲಾಗುತ್ತದೆ. ಈ ಅಂಟುವಾಳದ ಕಾಯಿಗಳು ಕರ್ನಾಟಕದ ಎಲ್ಲ ಗ್ರಂದಿಗೆ ಅಂಗಡಿಗಳಲ್ಲೂ ಸಹ ಲಭ್ಯವಿದೆ. ಈ ವೃಕ್ಷದ ಗಂಭೀರವಾದ ಅಡ್ಡ ಪರಿಣಾಮಗಳು ಇಲ್ಲದಿದ್ದರು ಕೂಡ ಈ ಕಾಯಿಗಳ ನೊರೆ ಅಥವಾ ರಸ ಕಣ್ಣಿಗೆ ಬೀಳದಂತೆ ಎಚ್ಚರ ವಹಿಸಬೇಕು ಗರ್ಭಿಣಿಯರು ಹಾಗೂ ಸ್ತನ್ಯಪಾನ ಮಾಡಿಸುವ ಸ್ತ್ರೀಯರು ಬಳಸುವಂತಿಲ್ಲ

Comments are closed.