
ಕೊಡಗು: ಮನೆ ಮಾಲೀಕನಿಂದ ಮಹಿಳೆ ಮೇಲೆ ಮಾನಭಂಗಕ್ಕೆ ಯತ್ನ ನಡೆಸಲಾಗಿದೆ ಎಂದು ಬಾಡಿಗೆದಾರ ಮಹಿಳೆ ದೂರು ನೀಡಿದ್ದಾಳೆ.
ಮನೆಯಲ್ಲಿ ಬಾಡಿಗೆ ಇದ್ದ ಮಹಿಳೆ ಜತೆ ಅನುಚಿತ ವರ್ತನೆ ಆರೋಪ ಮಾಡಿದ್ದಾಳೆ. ಎಮ್ಮೆಮಾಡು ಜಮಾಅತ್ ಅಧ್ಯಕ್ಷ ಕೆ.ಎಸ್. ಖಾದರ್ ಹಾಜಿ ಎಂಬಾತ ಮಾನಭಂಗಕ್ಕೆ ಯತ್ನ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಡಿಕೇರಿ ತಾಲೂಕಿನ ಎಮ್ಮೆಮಾಡು ಗ್ರಾಮದಲ್ಲಿ ಕೆ.ಎಸ್. ಖಾದರ್ ಹಾಜಿ ಮನೆಯಲ್ಲಿ ಸಂತ್ರಸ್ಥೆ ಬಾಡಿಗೆ ಇದ್ದಾರೆ. ಮನೆ ಮಾಲೀಕನ ಹೆಂಡತಿ ತಿಳಿಸದಂತೆ ಮಾಲೀಕನಿಗೆ ಊಟ ಕೊಡಲು ಹೋಗಿದ್ದಾಗ ಮಾನ ಭಂಗಕ್ಕೆ ಯತ್ನಿಸಿದ್ದಾನೆ.
ಮಾಲೀಕನ ಮಡದಿ ಊರಲ್ಲಿ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಮಾಲೀಕನ ಪತ್ನಿ ಸೂಚನೆ ಮೇರೆಗೆ ಊಟ ಕೊಡಲು ಹೋಗಿದ್ದ ಮಹಿಳೆ. ಈ ವೇಳೆ ಮನೆ ಮಾಲೀಕನಿಂದ ಮಹಿಳೆ ಜೊತೆ ಅಸಭ್ಯ ವರ್ತನೆ. ಕೈ ಹಿಡಿದು ಎಳೆದಾಡಿದ್ದಾನೆ. ಆತನಿಂದ ಬಿಡಿಸಿಕೊಂಡು ಓಡಿ ಬಂದಿದ್ದಾಲೆ ಸಂತ್ರಸ್ಥ ಮಹಿಳೆ.
ಆರೋಪಿ ವಿರುದ್ಧ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕ್ರಮಕೈಗೊಳ್ಳಲಾಗಿದೆ.
Comments are closed.