
ದುಬೈ:ಕಳೆದ ವಾರ ದುಬೈನ ಉಮ್ ಅಲ್ ಖ್ವಾವೈನ್ ಅಪಾರ್ಟ್ ಮೆಂಟ್ ನಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಪತ್ನಿಯನ್ನು ರಕ್ಷಿಸಲು ಹೋಗಿ ಶೇ.90ರಷ್ಟು ದೇಹ ಸುಟ್ಟು ಹೋಗಿದ್ದ ಪತಿ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.
ಕಳೆದ ಸೋಮವಾರ ಕೇರಳದ ಅನಿಲ್ ನಿನಾನ್ ಬೆಂಕಿ ದುರಂತದಲ್ಲಿ ಪತ್ನಿಯನ್ನು ರಕ್ಷಿಸಲು ಹೋದ ಸಂದರ್ಭದಲ್ಲಿ ನಿನಾನ್ ದೇಹ ಶೇ.90ರಷ್ಟು ಸುಟ್ಟು ಹೋಗಿತ್ತು ಎಂದು ಖಾಲೀಜ್ ಟೈಮ್ಸ್ ವರದಿ ಮಾಡಿತ್ತು.
ಘಟನೆಯಲ್ಲಿ ಪತ್ನಿ ಗಾಯಗೊಂಡಿದ್ದು, ಆಕೆ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಇದೊಂದು ತುಂಬಾ ಕಠಿಣ ಸಮಯ. ಪತ್ನಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ. ಆದರೆ ಪತಿ ಸಾವನ್ನಪ್ಪಿರುವುದು ನಮಗೆಲ್ಲಾ ಆಘಾತಕಾರಿ ವಿಷಯವಾಗಿದೆ ಎಂದು ನಿಕಟವರ್ತಿ ಸಂಬಂಧಿಯೊಬ್ಬರು ತಿಳಿಸಿರುವುದಾಗಿ ವರದಿ ವಿವರಿಸಿದೆ.
Comments are closed.