ಅಂತರಾಷ್ಟ್ರೀಯ

ಸ್ಯಾಮ್ಸಂಗ್ ನಿಂದ ಹೊಸ ಮಾದರಿಯ ಮಡಚುವ ಫೋನ್‌

Pinterest LinkedIn Tumblr


ಸ್ಯಾನ್‌ಫ್ರಾನ್ಸಿಸ್ಕೋ: ಜನಪ್ರಿಯ ಮೊಬೈಲ್‌ ಸಂಸ್ಥೆ ಸ್ಯಾಮ್‌ಸಂಗ್‌ ಹೊಸ ಮಾದರಿಯ ಮಡಚುವ ಫೋನ್‌ ‘ಗ್ಯಾಲಾಕ್ಸಿ ಝೆಡ್‌ ಫ್ಲಿಪ್‌’ ಹಾಗೂ ‘ಗ್ಯಾಲಾಕ್ಸಿ ಎಸ್‌ 20’ ಮಾದರಿಯ ಫೋನ್‌ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಫೆ. 14ರಿಂದ ಅದು ವಿಶ್ವದ ಮಾರುಕಟ್ಟೆ ಯಲ್ಲಿ ಲಭ್ಯವಾಗಲಿದೆ.

ಅದಕ್ಕೆ 1, 380 ಡಾಲರ್‌ ಬೆಲೆ ನಿಗದಿ ಮಾಡಲಾಗಿದೆ. ಹೊಸ ಮಾದರಿಯಲ್ಲಿ ಸ್ಮಾರ್ಟ್‌ಫೋನ್‌ನ ಅರ್ಧ ಭಾಗದ ಅನಂತರ ಅದನ್ನು ಮಡಚಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. 2019ರ ಸೆಪ್ಟಂಬರ್‌ನಲ್ಲಿ ಕಂಪೆನಿ ಮೊದಲ ಬಾರಿಗೆ ಮಡಚುವ ಫೋನ್‌ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಮೋಟರೋಲಾ ಕೂಡ ಇದೇ ಮಾದರಿಯ ಫೋನ್‌ಗಳನ್ನು ಮಾರುಕಟ್ಟೆಗೆ ತರುವ ಪ್ರಯತ್ನ ಮಾಡುತ್ತಿದೆ.

Comments are closed.