
ಹೊಸದಿಲ್ಲಿ: ಇಲ್ಲಿನ ಮನೆಯೊಂದರಲ್ಲಿ ಮೂವರು ಮಕ್ಕಳು ಸೇರಿದಂತೆ ಐವರ ಮೃತದೇಹ ಪತ್ತೆಯಾದ ಘಟನೆ ವರದಿಯಾಗಿದೆ. ಈಶಾನ್ಯ ದಿಲ್ಲಿಯ ಭಜನ್ ಪುರ ದಲ್ಲಿ ಈ ಘಟನೆ ನಡೆದಿದೆ.
ಆಟೋ ರಿಕ್ಷಾ ಚಾಲಕನಾಗಿದ್ದ ಶಂಭು (45) ಮತ್ತು ಆತನ ಪತ್ನಿ ಮತ್ತು ಮೂವರು ಮಕ್ಕಳು ಮೃತಪಟ್ಟವರು. ಮಕ್ಕಳು 12,14 ಮತ್ತು 18 ವರ್ಷ ವಯಸ್ಸಿನವರು ಎಂದು ತಿಳಿದುಬಂದಿದೆ.
ಮನೆಯಿಂದ ವಾಸನೆ ಬಂದ ಕಾರಣ ನೆರೆಹೊರೆಯ ಮನೆಯವರು ಇಂದು ಮಧ್ಯಾಹ್ನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಡಿಸಿಪಿ ವೇದ ಪ್ರಕಾಶ್ ಸೂರ್ಯ ಈ ಬಗ್ಗೆ ಮಾಹಿತಿ ನೀಡಿದ್ದು, ಈ ಐವರು ಕಳೆದ ಐದಾರು ದಿನಗಳ ಹಿಂದೆ ಸಾವನ್ನಪ್ಪಿರುವ ಸಾಧ್ಯತೆಯಿದೆ. ಶವ ಬಹಳಷ್ಟು ಕೊಳೆತುಹೋಗಿದೆ ಎಂದಿದ್ದಾರೆ.
ಮನೆಯ ಒಂದು ಬಾಗಿಲು ಒಳಗಡೆಯಿಂದ ಲಾಕ್ ಮಾಡಲಾಗಿದ್ದು, ಮತ್ತೊಂದು ಬಾಗಿಲನ್ನು ಹೊರಗಡೆಯಿಂದ ಬಂದ್ ಮಾಡಲಾಗಿತ್ತು. ಮೂವರ ಶವ ಒಂದು ಕೋಣೆಯಲ್ಲಿ ಪತ್ತೆಯಾಗಿದ್ದೆ, ಮತ್ತೊಂದು ಕೋಣೆಯಲ್ಲಿ ಮತ್ತಿಬ್ಬರ ಶವ ಪತ್ತೆಯಾಗಿತ್ತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
Comments are closed.