
ಕೊರೋನಾ ವೈರಸ್ ಅಟ್ಟಹಾಸಕ್ಕೆ ಚೀನಾದಲ್ಲಿ 425 ಜನರು ಮೃತಪಟ್ಟಿದ್ದಾರೆ. ಕೇರಳದಲ್ಲಿ ಮೂರು ಜನರಿಗೆ ಕೊರೋನಾ ವೈರಸ್ ತಗುಲಿರುವುದು ಖಚಿತವಾಗಿದೆ. ಪ್ರಕರಣದ ಗಂಭೀರತೆಯನ್ನು ಅರಿತಿರುವ ವಿಶ್ವ ಆರೋಗ್ಯ ಸಂಸ್ಥೆ ಪ್ರಪಂಚದಾದ್ಯಂತ ಆರೋಗ್ಯ ತುರ್ತು ಪರಿಸ್ಥಿತಿ ವಿಧಿಸಿದೆ.
ಜನವರಿ 25 ಚೀನಾದವರಿಗೆ ಹೊಸ ವರ್ಷ. ಈ ಸಂದರ್ಭದಲ್ಲಿ ಚೀನಾ ಜನರು ರಜೆಯ ಮಜ ಸವಿಯಲು ಬೇರೆ ಬೇರೆ ದೇಶಗಳಿಗೆ ಪ್ರಯಾಣ ಬೆಳೆಸುತ್ತಾರೆ. ಇದೇ ಸಂದರ್ಭದಲ್ಲಿ ಚೀನಾದ ವುಹಾನ್ ಪ್ರಾಂತ್ಯದಲ್ಲಿ ಕೊರೋನಾ ಭೀತಿ ಎದುರಾಗಿತ್ತು. ಏಕಾಏಕಿ 50ಕ್ಕೂ ಅಧಿಕ ಜನರು ಮೃತಪಟ್ಟಿದ್ದರು. ಹಾಗಾದರೆ ಈ ವೈರಸ್ ಏಕಾಏಕಿ ಹುಟ್ಟಿಕೊಂಡಿತಾ? ಇದರ ಜನನ ಹೇಗೆ? ವೈರಸ್ನ ಲಕ್ಷಣಗಳೇನು? ಆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಕಳೆದ ವರ್ಷವೇ ಕಾಣಿಸಿಕೊಂಡಿತ್ತು ವೈರಸ್:
ಕೊರೋನಾ ವೈರಸ್ ಚೀನಾದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳುತ್ತಿದೆ. ಈವರೆಗೆ ಸುಮಾರು 20 ಸಾವಿರ ಜನರಿಗೆ ಈ ವೈರಸ್ ತಗುಲಿದೆ ಎಂದು ಚೀನಾ ಸರ್ಕಾರ ಖಚಿತಪಡಿಸಿದೆ.ಇದುವರೆಗೂ 400ಕ್ಕೂ ಅಧಿಕ ಜನರು ಈ ವೈರಸ್ಗೆ ಬಲಿಯಾಗಿದ್ದಾರೆ. ಹಾಗಂತ ಕೊರೋನಾ ವೈರಸ್ ಚೀನಾದಲ್ಲಿ ಏಕಾಏಕಿ ಕಾಣಿಸಿಕೊಂಡಿದ್ದಲ್ಲ. ಈ ವೈರಸ್ ಪ್ರಕರಣ ಮೊದಲು ಪತ್ತೆಯಾಗಿದ್ದು ಕಳೆದ ವರ್ಷ ಡಿಸೆಂಬರ್ ಆರಂಭದಲ್ಲಿ. ನಿಧಾನವಾಗಿ ಈ ವೈರಸ್ ವುಹಾನ್ ಪ್ರಾಂತ್ಯದಾದ್ಯಂತ ಹಬ್ಬಿತ್ತು. ಈಗ ಏಷ್ಯಾ, ಯುರೋಪ್, ಉತ್ತರ ಅಮೆರಿಕ ಭಾಗದಲ್ಲಿ ಈ ವೈರಸ್ ಭೀತಿ ಎದುರಾಗಿದೆ.
ವೈರಸ್ ಹುಟ್ಟಿದ್ದು ಎಲ್ಲಿಂದ?:
ಉಳಿದ ಭೀಕರ ವೈರಸ್ಗಳಂತೆ ಕೊರೋನಾ ವೈರಸ್ ಕೂಡ ಬಂದಿದ್ದು ಪ್ರಾಣಿಗಳಿಂದಲೇ ಎಂಬುದು ಅಧ್ಯಯನದಿಂದ ಖಚಿತವಾಗಿದೆ. ಸೋಂಕಿತ ಪ್ರಾಣಿಯಿಂದ ಮೊದಲು ಈ ವೈರಸ್ ಮನುಷ್ಯನಿಗೆ ವರ್ಗಾವಣೆ ಆಗಿತ್ತು. ಅಂದಹಾಗೆ, ಈ ವೈರಸ್ ಮೊದಲು ಕಾಣಿಸಿಕೊಂಡಿದ್ದು, ವುಹಾನ್ ಸೀಫುಡ್ ಮಾರ್ಕೆಟ್ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನಿಗೆ. ಹೀಗಾಗಿ, ಈ ವೈರಸ್ ಮೊದಲು ಮನುಷ್ಯನಿಗೆ ವರ್ಗಾವಣೆಗೊಂಡಿದ್ದು ಇಲ್ಲಿಯೇ ಎಂದು ಹೇಳಲಾಗಿದೆ. ಈ ಮೊದಲು ಕಾಣಿಸಿಕೊಂಡಿದ್ದ ಭೀಕರ ಸಾರ್ಸ್ ರೋಗ ಇದೇ ಮಾರುಕಟ್ಟೆಯಿಂದ ಆರಂಭಗೊಂಡಿತ್ತು ಎಂಬುದು ಕುತೂಹಲಕರ ಸಂಗತಿ.ವೈರಸ್ ಹರಡುವುದು ಹೇಗೆ?:
ಕೊರೋನಾ ವೈರಸ್ ಮನುಷ್ಯನಿಂದ ಮನುಷ್ಯನಿಗೆ ಬಹುಬೇಗ ವರ್ಗಾವಣೆ ಆಗುತ್ತದೆ. ವೈರಸ್ ತಗುಲಿದ ವ್ಯಕ್ತಿಯ ಜೊತೆ ಯಾರಾದರೂ ಮಾತನಾಡುವಾಗ ಆತ ಕೆಮ್ಮಿದರೆ ವೈರಸ್ ಗಾಳಿಯ ಮೂಲಕ ಬಂದು ಮತ್ತೋರ್ವ ವ್ಯಕ್ತಿಗೆ ಸೇರುತ್ತದೆ. ಇನ್ನು, ಸಂಭೋಗದಿಂದಲೂ ವೈರಸ್ ವರ್ಗಾವಣೆ ಆಗಲಿದೆ ಎಂಬುದು ಸಂಶೋಧನೆಯಲ್ಲಿ ಖಚಿತವಾಗಿದೆ.
ಲಕ್ಷಣಗಳೇನು?:
ಕೊರೋನಾ ವೈರಸ್ ಪ್ರವೇಶಿಸಿದಾಗ ದೇಹದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತವೆ. ಆರಂಭದಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ. ನಂತರ ಒಣ ಕೆಮ್ಮು ಪ್ರಾರಂಭವಾಗುತ್ತದೆ, ಉಸಿರಾಡಲು ಕಷ್ಟವಾಗುತ್ತದೆ. ನಂತರ ಸಾವು ಸಂಭವಿಸುತ್ತದೆ.
ಕೊರೋನಾ ವೈರಸ್ಗಿದೆಯೇ ಔಷಧ?:
ವಿಶ್ವದಲ್ಲಿ ಸಾವಿನ ಭೀತಿ ಸೃಷ್ಟಿಸಿರುವ ಕೊರೋನಾ ವೈರಸ್ಗೆ ಈವರೆಗೆ ಔಷಧ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಸದ್ಯ, ಹಲವು ರಾಷ್ಟ್ರಗಳು ಈ ಬಗ್ಗೆ ಅಧ್ಯಯನ ಆರಂಭಿಸಿವೆ.
ಸಾರ್ಸ್ಗಿಂತ ಭಯಾನಕ:
2002-2003ರಲ್ಲಿ ಚೀನಾದಲ್ಲಿ ಸಾರ್ಸ್ ಹೆಸರಿನ ಭೀಕರ ರೋಗ ಕಾಣಿಸಿಕೊಂಡಿತ್ತು. ಇದು 650 ಜನರನ್ನು ಬಲಿ ತೆಗೆದುಕೊಂಡಿತ್ತು. ಈಗ ಪತ್ತೆಯಾಗಿರುವ ಕೊರೋನಾ ವೈರಸ್ಗೂ ಸಾರ್ಸ್ಗೂ ಸಾಮ್ಯತೆ ಇರುವುದರಿಂದ ವೈದ್ಯರು ಸಾಕಷ್ಟು ಆತಂಕಗೊಂಡಿದ್ದಾರೆ. ಅಲ್ಲದೆ, ಸಾರ್ಸ್ಗಿಂತಲೂ ಈ ವೈರಸ್ ಭಯಾನಕಾವಗಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
Comments are closed.