
ಬೆಂಗಳೂರು: ಚಳಿಗಾಲದಲ್ಲಿ ನಟಿ ಹರಿಪ್ರಿಯಾಗೆ ಅವರ ಅಮ್ಮ ಸ್ಪೆಷಲ್ ಗಿಫ್ಟ್ ವೊಂದನ್ನು ನೀಡಿದ್ದಾರೆ.
ಬೆಳಗ್ಗೆ ಎದ್ದ ತಕ್ಷಣ ಮೈ ಜುಮ್ಮೆನಿಸುವ ಚಳಿ. ಹೊರಗಡೆ ಕಾಲು ಹೆಜ್ಜೆ ಇಡಲು ಸಹ ಆಗಲ್ಲ. ಚಳಿಗಾಲದಲ್ಲಿ ಚರ್ಮದ ಆರೋಗ್ಯ ಕಾಪಾಡುವುದೇ ದೊಡ್ಡ ಸವಾಲು. ಅದರಲ್ಲೂ ಹೀರೋ, ಹಿರೋಯಿನ್ಗಳಿಂಗತೂ ತ್ವಚೆಯ ಆರೋಗ್ಯ ಕಾಪಾಡಿಕೊಂಡು ಸುಂದರವಾಗಿ ಕಾಣುವಂಥ ಡ್ರೆಸ್ ಹುಡುಕುವುದೇ ದೊಡ್ಡ ಸರ್ಕಸ್.
ಈ ನಿಟ್ಟಿನಲ್ಲಿ ಕನ್ನಡದ ನಟಿ ಹರಿಪ್ರಿಯಾ ತಾಯಿ, ತಮ್ಮ ಮಗಳಾದ ಹರಿಪ್ರಿಯಾಗಾಗಿ ವಿಶೇಷವಾದ ಕಂಬಳಿಯೊಂದನ್ನು ತಯಾರಿಸಿದ್ದಾರೆ. ಮತ್ಸ್ಯಕನ್ಯೆ ರೀತಿ ಕಲರ್ ಫುಲ್ ಆಗಿರುವ ಹೊದಿಕೆಯನ್ನು ಕೈಯಾರೆ ಸಿದ್ಧ ಮಾಡಿದ್ದಾರೆ. ಈ ವಿಚಾರವನ್ನು ಸ್ವತಃ ಹರಿಪ್ರಿಯಾ ಅವರೇ ಟ್ವೀಟ್ ಮಾಆಡುವ ಮೂಲಕ ರೀವಿಲ್ ಮಾಡಿದ್ದಾರೆ.
ಇದನ್ನು ಹೊದ್ದಿರುವ ಫೋಟೋವನ್ನು ಟ್ವೀಟ್ ಮಾಡಿರುವ ಹರಿಪ್ರಿಯಾ, ಈ ಚಳಿಗಾಲದಲ್ಲಿ ನಾನು ಈ ಮತ್ಸ್ಯಕನ್ಯೆ ಕಂಬಳಿಯಿಂದ ಮಾತ್ರ ಚಳಿಯನ್ನು ತಡೆಯಬಲ್ಲೆ. ಇದನ್ನು ತಯಾರಿಸಲು ತುಂಬ ಶ್ರಮ ಮತ್ತು ಸಮಯವನ್ನು ತೆಗದುಕೊಂಡಿದೆ. ಈ ಸೂಪರ್ ಕೂಲ್ ಮತ್ತು ವರ್ಣರಂಜಿತ ಕಂಬಳಿಯನ್ನು ನನಗಾಗಿ ಹೆಣೆದಿದ್ದಕ್ಕಾಗಿ ಅಮ್ಮನಿಗೆ ಧನ್ಯವಾದಗಳು. ಮಮ್ಮಿ ಈಸ್ ದ ಬೆಸ್ಟ್ ಎಂದು ಬರೆದುಕೊಂಡಿದ್ದಾರೆ.
Comments are closed.