ರಾಷ್ಟ್ರೀಯ

ಗಡ್ಡಧಾರಿಯಾಗಿ ಗುರುತೇ ಸಿಗದಂತಾದ ಒಮರ್ ಅಬ್ದುಲ್ಲಾ

Pinterest LinkedIn Tumblr


ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಪ್ರಾತಿನಿಧ್ಯದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ಕಳೆದ ವರ್ಷದ ಆಗಸ್ಟ್​ನಲ್ಲಿ ರದ್ದುಗೊಳಿಸಿದ ದಿನದಿಂದ ಬಂಧನದಲ್ಲಿ ಇರಿಸಲಾಗಿರುವ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಒಮರ್ ಅಬ್ದುಲ್ಲಾ ಅವರ ಫೋಟೋವನ್ನು ಶನಿವಾರ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಂಚಿಕೊಂಡಿದ್ದಾರೆ.

ಮಮತಾ ಬ್ಯಾನರ್ಜಿ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದಾರೆ. ತಲೆಗೆ ಟೋಪಿ, ಸ್ವಿಟರ್​ ಧರಿಸಿ ಸಂಪೂರ್ಣ ಗಡ್ಡದಾರಿಯಾಗಿರುವ ಒಮರ್ ಅಬ್ದುಲ್ಲಾ ಚಿತ್ರದಲ್ಲಿ ನಗುಮುಖದಲ್ಲಿ ಕಾಣಿಸುತ್ತಿದ್ದಾರೆ. ಆದರೆ, ಈ ಫೋಟೋವನ್ನು ಯಾವಾಗ ಕ್ಲಿಕ್ಕಿಸಿದ್ದು ಎಂಬುದು ಸ್ಪಷ್ಟವಾಗಿಲ್ಲ.

ಈ ಚಿತ್ರದಲ್ಲಿ ಒಮರ್ ಅಬ್ದುಲ್ಲಾರನ್ನು ಗುರುತಿಸಲು ನನಗೆ ಸಾಧ್ಯವಾಗುತ್ತಿಲ್ಲ. ನನಗೆ ತುಂಬಾ ದುಃಖವಾಗುತ್ತಿದೆ. ಪ್ರಜಾಪ್ರಭುತ್ವ ದೇಶದಲ್ಲಿ ಇಂತಹ ಸಂಗತಿಗಳು ನಡೆಯುತ್ತಿರುವುದು ನಮ್ಮ ದುರದೃಷ್ಟಕರ. ಯಾವಾಗ ಇದಕ್ಕೆ ಕೊನೆ? ಎಂದು ಮಮತಾ ಬ್ಯಾನರ್ಜಿ ಅವರು ಅಸಮಾಧಾನದ ಪ್ರಶ್ನೆ ಮಾಡಿದ್ದಾರೆ.

ಕಳೆದ ವರ್ಷದ ಆಗಸ್ಟ್ 5ರಂದು 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರದ ಒಮರ್ ಅವರ ತಂದೆ ಫಾರೂಖ್ ಅಬ್ದುಲ್ಲಾ, ಮಾಜಿ ಸಿಎಂಗಳಾದ ಮೆಹಬೂಬ್ ಮುಫ್ತಿ, ಒಮರ್ ಅಬ್ದುಲ್ಲಾ ಸೇರಿದಂತೆ ನೂರಾರು ರಾಜಕೀಯ ಮುಖಂಡರು, ಸಾಮಾಜಿಕ ಕಾರ್ಯಕರ್ತರು, ವಕೀಲರು, ಉದ್ಯಮಿಗಳನ್ನು ಬಂಧನಕ್ಕೆ ಒಳಪಡಿಸಿತು.

ಅಬ್ದುಲ್ಲಾ, ಮುಫ್ತಿ ಮತ್ತು ಇತರೆ ರಾಜಕಾರಣಿಗಳನ್ನುಸೆಕ್ಷನ್ 107ರ ಅಡಿಯಲ್ಲಿ ಬಂಧಿಸಲಾಗಿದೆ. ಈ ಸೆಕ್ಷನ್ ಪ್ರಕಾರ, ಯಾವುದೇ ವ್ಯಕ್ತಿ ಶಾಂತಿ ಕದಡುವ ಅಥವಾ ಸಾರ್ವಜನಿಕಗೆ ಶಾಂತಿಗೆ ಭಂಗ ತರುವ ಮಾಹಿತಿ ಸಿಕ್ಕಲ್ಲಿ ಅಧಿಕಾರಿಗಳು ಮತ್ತು ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್​ಗಳು ಆ ವ್ಯಕ್ತಿಯನ್ನು ಆರು ತಿಂಗಳುಗಳ ಕಾಲ ಬಂಧಿಸುವ ಅವಕಾಶವಿದೆ.

ಜಮ್ಮು-ಕಾಶ್ಮೀರದ ಪ್ರಮುಖ ರಾಜಕಾರಣಿಯಾಗಿರುವ ಫಾರೂಕ್ ಅಬ್ದುಲ್ಲಾ ಅವರ ವಿರುದ್ಧ ಕಠಿಣ ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್ಎ) ಯಡಿ ಸೆಪ್ಟೆಂಬರ್ 17ರಂದು ಮೂರು ತಿಂಗಳ ಅವಧಿಗೆ ಬಂಧಿಸಲಾಯಿತು. ಬಂಧನ ಅವಧಿಯನ್ನು ಡಿಸೆಂಬರ್ 16ರಂದು ಮತ್ತೆ ನವೀಕರಿಸಲಾಯಿತು.

Comments are closed.