ಕರ್ನಾಟಕ

ರಾಜ್ಯದಲ್ಲಿ ಮೋದಿ: ಟ್ವಿಟರ್ ನಲ್ಲಿ ಮತ್ತೆ ‘ಗೋಬ್ಯಾಕ್’ ಟ್ರೆಂಡ್

Pinterest LinkedIn Tumblr


ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಕರ್ನಾಟಕ ಭೇಟಿಗಾಗಿ ಗುರುವಾರ ಬೆಂಗಳೂರಿಗೆ ಆಗಮಿಸಿದರು. ಪ್ರಧಾನಿ ಆಗಮನಕ್ಕೂ ಕೆಲವು ಗಂಟೆಗಳ ಮೊದಲು ಟ್ವಿಟರ್‌ನಲ್ಲಿ ಮೋದಿ ಅವರ ರಾಜ್ಯ ಭೇಟಿ ವಿರೋಧಿಸಿ ಗೋ ಬ್ಯಾಕ್ ಮೋದಿ ಎಂದು ಹ್ಯಾಶ್‌ಟ್ಯಾಗ್ ಸೃಷ್ಟಿಸಿದ್ದು, ಟ್ರೆಂಡ್ ಆಗಿದೆ.

ರಾಜ್ಯದಲ್ಲಿ ಭೀಕರ ನೆರೆ ಬಂದಾಗ ಬರದ ಪ್ರಧಾನಿ ಈಗ ಏಕೆ ಬಂದಿದ್ದೀರಿ? ಎಂದು ಪ್ರಶ್ನಿಸಿರುವ ಟ್ವೀಟಿಗರು, ‘ಗೋ ಬ್ಯಾಕ್‌ ಮೋದಿ’ ಎಂದು ಟ್ವೀಟ್ ಮಾಡುತ್ತಿದ್ದಾರೆ.

ಈ ಹಿಂದೆ ಮೋದಿ ಅವರು ಚೀನಾ ಅಧ್ಯಕ್ಷ ಕ್ಸಿ-ಜಿನ್‌ಪಿಂಗ್‌ ಅವರೊಂದಿಗೆ ಅನೌಪಚಾರಿಕ ಸಭೆಯಲ್ಲಿ ಪಾಲ್ಗೊಳ್ಳಲು ಚೆನ್ನೈಗೆ ಭೇಟಿ ನೀಡಿದ ವೇಳೆ ಇದೇ ರೀತಿಯ ವಿರೋಧ ವ್ಯಕ್ತವಾಗಿತ್ತು ಮತ್ತು #GoBackModi ಟ್ರೆಂಡ್‌ ಶುರುವಾಗಿತ್ತು.

ರಾಜ್ಯದಲ್ಲಿನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಇಂದು ಮಧ್ಯಾಹ್ನ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸ್ವಾಗತಿಸಿದರು. ಬೆಂಗಳೂರಿನಿಂದ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಪ್ರಧಾನಿ ಡಾ. ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದರು.

Comments are closed.