ಕರಾವಳಿ

ಮಂಗಳೂರು ವಾಹಿನಿಯ ಮುಖ್ಯಸ್ಥ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಟ್ವಿಸ್ಟ್ – ಪೊಲೀಸರು ಹೇಳೋದೇನು?

Pinterest LinkedIn Tumblr

ಉಡುಪಿ: ಮಂಗಳೂರು ಮೂಲದ ಮಂಗಳೂರು ನ್ಯೂಸ್ ಚಾನೆಲ್ ಮಾಲೀಕ ರೋಹಿತ್ ರಾಜ್ (56) ಅವರು ಉಡುಪಿಯಲ್ಲಿ ಹೊಸ ವರ್ಷಾಚರಣೆ ಬಳಿಕ ತಮ್ಮದೇ ಅಪಾರ್ಟ್‌ಮೆಂಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಮಣಿಪಾಲ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿ ತನಿಖೆಯಲ್ಲಿದ್ದು ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಯ ಫಾರೆನ್ಸಿಕ್ ಮೆಡಿಸಿನ್ ವಿಭಾಗದ ವೈದಾಧಿಕಾರಿಗಳ ತಂಡ ಭೇಟಿ ನೀಡಿದೆ, ವೈದ್ಯಾಧಿಕಾರಿಗಳಿಂದ ಮರಣೋತ್ತರ ಪರೀಕ್ಷೆ ವರದಿ ಹಾಗೂ ಎಫ್.ಎಸ್.ಎಲ್. ವರದಿ ಬಂದ ಬಳಿಕ ಮರಣದ ಸ್ಪಷ್ಟ ಕಾರಣ ತಿಳಿಯಲಿದೆ ಎಂದು ಉಡುಪಿ ಪೊಲೀಸರು ತಿಳಿಸಿದ್ದಾರೆ.

ಡಿ.31ರ ಸಂಜೆ ಹೊಸ ವರ್ಷದ ಆಚರಣೆಗಾಗಿ ರೋಹಿತ್ ರಾಜ್ ಮತ್ತು ಆತನ ಕೊಲ್ಕತ್ತಾ ಮೂಲದ ಗೆಳತಿ ಕೋಲ್ಕತ್ತ ಮೂಲದ ರೂಮಾ ಸಹಾನಿ ಮತ್ತು ಚಾನೆಲ್‌ನಲ್ಲಿ ಕೆಲಸ ಮಾಡುವ ಇಬ್ಬರ ಸಹಿತ ಒಟ್ಟು ನಾಲ್ವರು ಉಡುಪಿಯ ಮಣಿಪಾಲದಲ್ಲಿರುವ ಹೋಟೇಲ್ ಒಂದರಲ್ಲಿ ರಾತ್ರಿ ಊಟ ಮಾಡಿ, ನಂತರ ಅಪಾರ್ಟಮೆಂಟ್ಗೆ ತೆರಳಿದ್ದು ಜ.1 ರಂದು ಬೆಳಿಗ್ಗೆ ರೋಹಿತ್ ರಾಜ್ ಗೆಳತಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ರೋಹಿತ್ ರಾಜ್ ಅವರನ್ನು ಹೋಟೇಲ್ ಸೆಕ್ಯೂರಿಟಿ ಗಾರ್ಡ್ಗಳ ಸಹಾಯದಿಂದ ಆಂಬುಲೆನ್ಸ್ ಮೂಲಕ ಕೆ.ಎಂ.ಸಿ. ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಿದ್ದು, ರೋಹಿತ್ ರಾಜ್ ರವರು ಮೃತಪಟ್ಟಿರುವುದಾಗಿ ವೈದ್ಯಾಧಿಕಾರಿಯವರು ತಿಳಿಸಿದ್ದರು.

ಈ ಬಗ್ಗೆ ರೋಹಿತ್ ರಾಜ್ ರವರ ತಂದೆ ವಿಶ್ವನಾಥ್ ರವರು ಮಣಿಪಾಲ ಪೊಲೀಸ್ ಠಾಣೆಗೆ ಹಾಜರಾಗಿ ಲಿಖಿತ ದೂರನ್ನು ಸಲ್ಲಿಸಿದ್ದು ರೋಹಿತ್ ರಾಜ್‌ರವರು ಈ ಹಿಂದೆ 2 ಮದುವೆಯಾಗಿ ವಿಚ್ಚೇದನಕ್ಕಾಗಿ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯಲ್ಲಿದೆ. ಸಾಂಸಾರಿಕ ಜೀವನದಲ್ಲಿ ಅವರು ಮನಸ್ಸಿಗೆ ಬೇಜಾರು ಮಾಡಿಕೊಂಡಿದ್ದರು. ಇತ್ತೀಚೆಗೆ ಕೋಲ್ಕತ್ತ ಮೂಲದ ಯುವತಿಯನ್ನು ಮದುವೆಯಾಗಿ ಮಣಿಪಾಲದ ಅಪಾರ್ಟಮೆಂಟ್‌ನಲ್ಲಿ ಬಾಡಿಗೆಗೆ ಉಳಿದುಕೊಂಡಿದ್ದು, ಯಾವುದೋ ವಿಷಯದಿಂದ ಮನಸ್ಸಿಗೆ ಬೇಸರ ಮಾಡಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿ ಕೆಳಗೆ ಬಿದ್ದು ರಕ್ತಸ್ರಾವದಿಂದ ಮೃತಪಟ್ಟಿರಬಹುದು ಎಂದು ದೂರು ನೀಡಿದ್ದರು.

ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಸ್ವಾಮಿ, ಡಿವೈಎಸ್ಪಿ ಜೈಶಂಕರ್ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಯ ಫಾರೆನ್ಸಿಕ್ ಮೆಡಿಸಿನ್ ವಿಭಾಗದ ವೈದಾಧಿಕಾರಿಗಳ ತಂಡ ಭೇಟಿ ನೀಡಿರುತ್ತಾರೆ. ವೈದ್ಯಾಧಿಕಾರಿಗಳಿಂದ ಮರಣೋತ್ತರ ಪರೀಕ್ಷೆ ವರದಿ ಹಾಗೂ ಎಫ್.ಎಸ್.ಎಲ್. ವರದಿ ಬಂದ ಬಳಿಕ ಮರಣದ ಸ್ಪಷ್ಟ ಕಾರಣ ತಿಳಿಯಲಿದೆ ಎಂದು ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Comments are closed.