ಕರಾವಳಿ

ಮೋದಿಯನ್ನು ಟ್ವೀಟ್’ನಲ್ಲಿ ಠೀಕಿಸಿದ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಸಚಿವ ಕೋಟ!

Pinterest LinkedIn Tumblr

ಉಡುಪಿ: ಪ್ರದಾನಿ ಮೋದಿಯವರು ಗುರುವಾರದಂದು ತುಮಕೂರು ಕಾರ್ಯಕ್ರಮದಲ್ಲಿದ್ದು ಈ ಕಾರ್ಯಕ್ರಮ ಹಾಗೂ ಪ್ರದಾನಿ ಮೋದಿ ಭಾಷಣದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಕೊಟ್ಟ ಹೇಳಿಕೆಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿ ಟ್ವೀಟ್ ಮಾಡಿ ಟಾಂಗ್ ನೀಡಿದ್ದಾರೆ.

ಸಿದ್ದರಾಮಯ್ಯ ಹೇಳಿದ್ದೇನು?
ತುಮಕೂರಿನ‌‌ ಸಿದ್ದಗಂಗಾ ಮಠಕ್ಕೆ ಜಾತ್ಯತೀತ ಮತ್ತು ಪಕ್ಷಾತೀತವಾದ ಗೌರವದ ಸ್ಥಾನ ಇದೆ. ಈ ಕಾರಣಕ್ಕಾಗಿಯೇ ಅದು ಸರ್ವರೂ ಭಕ್ತಿಯಿಂದ ನಮಿಸುವ ಕ್ಷೇತ್ರ. ಇಂತಹ ಕ್ಷೇತ್ರದಲ್ಲಿ ಎಳೆಯ ಮಕ್ಕಳನ್ನು ಕೂರಿಸಿಕೊಂಡು ಕೊಳಕು ರಾಜಕೀಯದ ಭಾಷಣ ಮಾಡಿದ ಮೋದಿ ಅವರೇ, ನಿಮ್ಮನ್ನು ಆ ಪವಿತ್ರ ನೆಲ‌ ಕ್ಷಮಿಸದುಎಂದು ಪ್ರದಾನಿ ಮೋದಿ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರು.

ಕೋಟ ರೀ ಟ್ವೀಟ್…
ಇದಕ್ಕೆ ತೀಕ್ಷ್ಣವಾಗಿಯೇ ಸಚಿವ ಕೋಟ ಶ್ರೀನಿವಾಸ ಪೂಜಾರಿ ಟ್ವೀಟ್ ಮಾಡಿದ್ದಾರೆ. ಸಿದ್ದಗಂಗಾ ಮಠದಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಅವರು ಆಡಿದ ಮಾತು ಶ್ರೇಷ್ಠ ಸಂತನ ಕರ್ಮ ಭೂಮಿಯಲ್ಲಿ ಭವ್ಯ ಭಾರತದ ನಿರ್ಮಾಣದತ್ತ ಸಾಗಲಿರುವ ನುಡಿಮುತ್ತುಗಳಾಗಿವೆ. ಮಾಂಸ ತಿಂದು ಗರ್ಭಗುಡಿ ಪ್ರವೇಶಿಸುತ್ತೇನೆನ್ನುವವರಿಗೆ ಸನಾತನ ಧರ್ಮದ ಸಂಸ್ಕ್ರತಿಯ ಅರಿವಿರುವುದೆಂತು? ಎಂದು ಪ್ರತಿಯಾಗಿ ಟ್ವೀಟ್ ಮಾಡಿ ಅಸಮಾಧಾನ ಹೊರಹಾಕಿದ್ದಾರೆ.

(ಕ್ರಪೆ- ಟ್ವೀಟರ್)

Comments are closed.