
ಟಾಲಿವುಡ್‌ನಲ್ಲಿ ಸ್ಟಾರ್ ಹೀರೋಯಿನ್ ಅನ್ನಿಸಿಕೊಂಡಿರುವ ಕರ್ನಾಟಕ ಮೂಲದ ನಟಿ ಪೂಜಾ ಹೆಗ್ಡೆ ಈಗ ಬಾಲಿವುಡ್‌ನಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಈ ವರ್ಷ ಅವರು ನಟಿಸಿದ ಸಿನಿಮಾಗಳು ಮಹರ್ಷಿ, ಗದ್ದಲಕೊಂಡ ಗಣೇಶ್, ಹೌಸ್‍ಫುಲ್ 4 ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿವೆ.
ಪೂಜಾ ಹೆಗ್ಡೆ ನಟಿಸಿರುವ ತೆಲುಗಿನ ‘ಅಲಾ ವೈಕುಂಠಪುರಮುಲೋ’ ಸಿನಿಮಾ ಜನವರಿ 12ಕ್ಕೆ ಪ್ರೇಕ್ಷಕರ ಮುಂದೆ ಬರುತ್ತಿದೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಪೂಜಾ ಚುಂಬನ ಸನ್ನಿವೇಶಗಳ ಬಗ್ಗೆ ಮನಬಿಚ್ಚಿ ಹೇಳಿಕೊಂಡಿದ್ದಾರೆ. ಬಾಲಿವುಡ್‌ನ ಮೊಹೆಂಜೊದಾರೋ ಸಿನಿಮಾದಲ್ಲಿ ಹೃತಿಕ್ ರೋಷನ್‍ಗೆ ನೀಡಿರುವ ಲಿಪ್‍ಲಾಕ್ ಬಗ್ಗೆ ಮಾತನಾಡಿದ್ದಾರೆ.
ಚುಂಬನ ದೃಶ್ಯಗಳನ್ನು ಬೆಳ್ಳಿಪರದೆ ಮೇಲೆ ನೋಡಲು ಪ್ರೇಕ್ಷಕರಿಗೆ ಚೆನ್ನಾಗಿರುತ್ತದೆ. ಆದರೆ ಆ ಸೀನ್‌ನಲ್ಲಿ ಅಭಿನಯಿಸಲು ತಾರೆಗಳು ಎಷ್ಟೆಲ್ಲಾ ಕಷ್ಟಪಡಬೇಕಾಗುತ್ತದೆ ಗೊತ್ತಾ ಅಂದಿದ್ದಾರೆ. ಹೃತಿಕ್ ಜೊತೆಗೆ ಚುಂಬನ ಸನ್ನಿವೇಶ ಇದೆ ಎಂದು ಶೂಟಿಂಗ್‍ಗೆ ಮುನ್ನವೇ ನನಗೆ ವಿವರಿಸಿದ್ದರು ನಿರ್ದೇಶಕರು. ಹಾಗಾಗಿ ಲಿಪ್ ಲಾಕ್ ಸೀನ್‌ಗೆ ಸಿದ್ಧವಾಗಿದ್ದೆ ಎಂದಿದ್ದಾರೆ.
ಆದರೆ ಆ ಸಮಯದಲ್ಲಿ ತುಂಬಾ ಭಯವಾಯಿತು, ಕಿರಿಕಿರಿ ಅನ್ನಿಸಿತು. ಇದಕ್ಕೂ ಮುನ್ನ ಅಂತಹ ಸನ್ನಿವೇಶಗಳಲ್ಲಿ ನಾನು ಅಭಿನಯಿಸಿರಲಿಲ್ಲ. ನಮ್ಮ ಸುತ್ತಲೂ ಸಾಕಷ್ಟು ಜನ ನಿಂತಿದ್ದರು. ತುಂಬಾ ಕಷ್ಟ ಅನ್ನಿಸಿತು. ರೊಮ್ಯಾಂಟಿಕ್ ಸನ್ನಿವೇಶಗಳಲ್ಲಿ ತಾರಾಗಣದ ನಡುವೆ ಕೆಮಿಸ್ಟ್ರಿ ತುಂಬಾ ಮುಖ್ಯ ಎಂದಿದ್ದಾರೆ ಪೂಜಾ ಹೆಗ್ಡೆ.
ಅದೇ ರೀತಿ ಕ್ಯಾಮೆರಾ ಟ್ರಿಕ್ಸ್ ಸಹ ಈ ವಿಚಾರದಲ್ಲಿ ಗಮನಾರ್ಹ ಪಾತ್ರ ವಹಿಸುತ್ತದೆ. ಅವುಗಳಿಂದ ಕಿರಿಕಿರಿ ಸನ್ನಿವೇಶಗಳಿಂದ ತಪ್ಪಿಸಿಕೊಳ್ಳುತ್ತೇವೆ ಎಂದಿದ್ದಾರೆ. ಸದ್ಯಕ್ಕೆ ಪ್ರಭಾಸ್ ಜೊತೆ ‘ಜಾನ್’ ಎಂಬ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಪೂಜಾ.
Comments are closed.