ಮನೋರಂಜನೆ

ಬಿಟೌನ್ ಬಾಕ್ಸಾಫೀಸ್​​ನಲ್ಲಿ ಸಲ್ಮಾನ್ ಖಾನ್-ಸುದೀಪ್ ಜಿದ್ದಾ ಜಿದ್ದಿ..!

Pinterest LinkedIn Tumblr


ವಿಶ್ವಾದ್ಯಂತ ಸುಮಾರು ಏಳು ಸಾವಿರ ಪರದೆಗಳಲ್ಲಿ ತೆರೆಕಂಡ ಸಿನಿಮಾ ದಬಾಂಗ್ -3. ಬಾಲಿವುಡ್​ ಬಾಕ್ಸಾಫೀಸ್ ಸುಲ್ತಾನ ಎಂದು ಕರೆಸಿಕೊಳ್ಳುವ ಸಲ್ಲು ಈ ಬಾರಿ ಕೊಂಚ ಓಪನಿಂಗ್ ಡಲ್ ಹೊಡೆದಿದ್ದಾರೆ. ಒಂದೇ ದಿನಕ್ಕೆ 24 ಕೋಟಿ ಐವತ್ತು ಲಕ್ಷ ಸಂಪಾದಿಸಲಷ್ಟೇ ಶಕ್ತರಾಗಿದ್ದಾರೆ.

ಈ ಹಿಂದೆ ‘ಭಾರತ್’ ಸಿನಿಮಾ ಮೊದಲ ದಿನವೇ 42.3 ಕೋಟಿ ರೂ. ಗಳಿಕೆ ಮಾಡಿತ್ತು. ಸಲ್ಮಾನ್ ಸಿನಿಮಾ ಕರಿಯರ್​ನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಖ್ಯಾತಿ ‘ಭಾರತ್’ ಹೆಸರಲ್ಲಿದೆ. ‘ದಬಂಗ್ 3’ ಕ್ರೇಜ್ ಶುರುವಾದ ಮೇಲೆ ಆ ದಾಖಲೆ ಪುಡಿಪುಡಿ ಆಗಲಿದೆ ಎಂದೇ ಹೇಳಲಾಗಿತ್ತು. ಆದರೆ, ಫಲಿತಾಂಶ ಬಂದ ಬಳಿಕ ಲೆಕ್ಕಾಚಾರ ಉಲ್ಟಾ ಆಗಿದೆ. ಭಾರಿ ನಿರೀಕ್ಷೆ ಮೂಡಿಸಿದ್ದ ‘ದಬಂಗ್ 3’ ಮೊದಲ ದಿನ ಎಲ್ಲ ಭಾಷೆಯಲ್ಲಿ ಕೇವಲ 24 ಕೋಟಿ ರೂ. ಗಳಿಸಲಷ್ಟೇ ಶಕ್ಯವಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಹಿನ್ನೆಲೆಯಲ್ಲಿ ದೇಶಾದ್ಯಂತ ನಡೆಯುತ್ತಿರುವ ಅಹಿತಕರ ಘಟನೆಗಳೇ ಚಿತ್ರದ ಹಿನ್ನಡೆಗೆ ಕಾರಣ ಎನ್ನಲಾಗುತ್ತಿದೆ.

ಇದಿಷ್ಟು ಓವರ್ ದಬಾಂಗ್ -3ರಿಪೋರ್ಟ್. ಆದ್ರೆ ಕರ್ನಾಟಕದಲ್ಲಿ ಇಂದು ಉಲ್ಟಾ. ನಮ್ಮ ಕರ್ನಾಟಕದಲ್ಲಿ ಮೂರನೇ ದಬಾಂಗ್​​​ಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಜೊತೆಗೆ ಒಳ್ಳೆಯ ಕಲೆಕ್ಷನ್​ ಕೂಡ ಮಾಡಿ ಮುನ್ನುಗುತ್ತಿದೆ. ಇದಕ್ಕೆ ಕಾರಣ ಕಿಚ್ಚ ಸುದೀಪ್ ಎನ್ನುತ್ತಿವೆ ಗ್ರೌಂಡ್ ರಿಪೋರ್ಟ್​​​​. ಸುಲ್ತಾನನ ಎದುರು ನಮ್ಮ ಪೈಲ್ವಾನ ಹೆಂಗೆ ಘರ್ಜಿಸಿರ ಬಹುದು ಎಂದು ಕನ್ನಡಿಗರು ಥಿಯೇಟರ್​​ ನತ್ತ ಹೆಜ್ಜೆ ಇಡುತ್ತಿದ್ದಾರೆ.

ಈ ವರ್ಷದ ಬಹು ನಿರೀಕ್ಷಿತ ಸಿನಿಮಾ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ‘ದಬಂಗ್-3’ ಸಿನಿಮಾ ಡಿ. 20ಕ್ಕೆ ತೆರೆಕಂಡಿತು. ಅದರಲ್ಲೂ ಕನ್ನಡಕ್ಕೆ ಡಬ್ ಆಗಿ ತೆರೆಕಂಡಿದ್ದ ಚಿತ್ರವನ್ನು ಕನ್ನಡದ ಸಿನಿಮಾ ಎಂಬಂತೆ ಸಿನಿಪ್ರೇಮಿಗಳು ಕಣ್ತುಂಬಿಕೊಳ್ಳುತ್ತಿದ್ದಾರೆ. ಹಾಗಾಗಿ ಮೊದಲ ದಿನವೇ ‘ದಬಂಗ್-3’ ಬೊಕ್ಕಸಕ್ಕೆ ಕರ್ನಾಟಕದಿಂದ 4 ಕೋಟಿ ರೂ.ಗೂ ಅಧಿಕ ಹಣ ಹರಿದು ಬಂದಿದೆ. ಈ ಗಳಿಕೆ ಚಿತ್ರದ ವಿತರಕ ಜಾಕ್ ಮಂಜು ಫುಲ್ ಖುಷ್ ಆಗಿದ್ದಾರೆ.

Comments are closed.