ಮನೋರಂಜನೆ

ಸೌತ್ ಫಿಲ್ಮ್ ಫೇರ್​​​ ಪ್ರಶಸ್ತಿ: ಅತ್ಯುತ್ತಮ ನಟ ನಟಿ ಯಾರು ಗೊತ್ತಾ?

Pinterest LinkedIn Tumblr


ಚೆನ್ನೈನಲ್ಲಿ ನಡೆದ 66ನೇ ಫಿಲಂಫೇರ್​​ ಸೌತ್​ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಸೌತ್​ ಸಿನಿದುನಿಯಾದ ತಾರ ದಂಡು ನೆರೆದಿತ್ತು. 2018ರಲ್ಲಿ ತೆರೆಕಂಡ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳ ಸಿನಿಮಾಗಳಿಗಾಗಿ ವಿವಿಧ ವಿಭಾಗಗಳಲ್ಲಿ ವಿಂಗಡಿಸಿ, ಪ್ರಶಸ್ತಿ ನೀಡಿ ಗೌರವಿಸಲಾಯ್ತು.

ಕನ್ನಡದ ಕೆಜಿಎಫ್ ಚಿತ್ರ ಅತ್ಯುತ್ತಮ ಚಿತ್ರವಾಗಿದ್ದು ರಾಕಿಂಗ್​​ ಸ್ಟಾರ್​​ ಯಶ್​ ಅತ್ಯುತ್ತಮ ನಟನಾಗಿದ್ದಾರೆ. ಮಾನ್ವಿತಾ ಹರೀಶ್​​ ಗೆ ಟಗರು ಸಿನಿಮಾಗಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ರೆ , ಟಗರು ಚಿತ್ರಕ್ಕಾಗಿ ಡಾಲಿ ಧನಂಜಯ್​ ಅತ್ಯುತ್ತಮ ಸಹ ಕಲಾವಿದ ಪ್ರಶಸ್ತಿ ಪಟ್ಟಕ್ಕೆ ಭಾಜನರಾಗಿದ್ದಾರೆ.

2018ರಲ್ಲಿ ತೆರೆಕಂಡ ಶೃತಿ ಹರಿಹರನ್ , ಸಂಚಾರಿ ವಿಜಯ್ ನಟನೆಯ ನಾತಿಚರಾಮಿ ಚಿತ್ರಕ್ಕೆ ನಾಲ್ಕು ಪ್ರಶಸ್ತಿಗಳು ಬಂದಿದೆ. ವಿಮರ್ಶಕರ ಅತ್ಯುತ್ತಮ ನಟಿ ಶೃತಿ ಹರಿಹರನ್​​, ಅತ್ಯುತ್ತಮ ನಿರ್ದೇಶಕ ಮನ್ಸೂರೆ, ಅತ್ಯುತ್ತಮ ಸಹಾ ಕಲಾವಿದೆಯಾಗಿ ಶರಣ್ಯ ಹಾಗೂ ಅತ್ಯುತ್ತಮ ಹಿನ್ನಲೆ ಗಾಯಕಿಯಾಗಿ ಬಿಂದುಮಾಲಿನಿಗೆ ಪ್ರಶಸ್ತಿ ಒಲಿದಿದೆ. ಅಯೋಗ್ಯ ಸಿನಿಮಾಗಾಗಿ ನಟ ಸತೀಶ್​​ಗೆ ವಿಮರ್ಶಕರ ಅತ್ಯುತ್ತಮ ನಟನಾಗಿ ಕಪ್ಪು ಸುಂದರಿಗೆ ಮುತ್ತಿಟ್ಟಿದ್ದಾರೆ.

ಇನ್ನೂ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಕಾಸರಗೋಡು ಚಿತ್ರದ ಸಂಗೀತ ನಿರ್ದೇಶಕಕ್ಕಾಗಿ ವಾಸುಕಿ ವೈಭವ್ ಅವರಿಗೆ ಪ್ರಶಸ್ತಿ ಬಂದಿದೆ. ಶಾಕುಂತಲೆ ಸಿಕ್ಕಳು ಹಾಡಿಗಾಗಿ ಸಚಿತ್​​ ಹೆಗ್ಡೆಗೆ ಅತ್ಯುತ್ತಮ ಗಾಯಕ ಪ್ರಶಸ್ತಿ ಸಿಕ್ಕಿದ್ರೆ, ಹಸಿರು ರಿಬ್ಬನ್​ ಚಿತ್ರದ ಸಕ್ಕರೆಯ ಪಾಕದಲ್ಲಿ ಸಾಹಿತ್ಯಕ್ಕಾಗಿ ಡಾ. ಹೆಚ್​.ಎಸ್​ ವೆಂಕಟೇಶ್​ ಮೂರ್ತಿಗೆ ಅತ್ಯುತ್ತಮ ಸಾಹಿತ್ಯ ಪ್ರಶಸ್ತಿ ಸಿಕ್ಕಿದೆ.

ಭರಾಟೆ ಮತ್ತು ಕಿಸ್ ಖ್ಯಾತಿಯ ಬೆಡಗಿ ಶ್ರೀಲೀಲಾ ಕೆಜಿಎಫ್ ಹಾಡಿಗೆ ಹೆಜ್ಜೆ ಹಾಕುವ ಮೂಲಕ ನೆರೆದವರನ್ನು ರಂಜಿಸಿದ್ರು. ಇನ್ನೂ ತೆಲುಗಿನ ರಂಗಸ್ಥಳ ಚಿತ್ರದ ನಟನೆಗಾಗಿ ರಾಮ್​ಚರಣ್​ ಮತ್ತು ತಮಿಳಿನ ವಡ ಚೆನ್ನೈ ಚಿತ್ರದ ನಟನೆಗೆ ಧನುಷ್​ಗೆ ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದ್ದಾರೆ. ಒಟ್ಟಾರೆಯಾಗಿ 66ನೇ ಫಿಲಂಫೇರ್​ ಸೌತ್​ ಪ್ರಶಸ್ತಿ ಕಾರ್ಯಕ್ರಮ ಅದ್ದೂರಿಯಾಗಿ ನೇರವೇರಿತ್ತು.

Comments are closed.