ರಾಷ್ಟ್ರೀಯ

ತೆಲಂಗಾಣದಲ್ಲಿ ಮೂವರು ಮಹಿಳೆಯರಿಂದ ಯುವಕನ ಮೇಲೆ ಅತ್ಯಾಚಾರ?

Pinterest LinkedIn Tumblr


ಹೈದ್ರಾಬಾದ್​: ತೆಲಂಗಾಣ ಅತ್ಯಾಚಾರ ಪ್ರಕರಣ ನಡೆದ ಬೆನ್ನಲ್ಲೇ ಮೇದಕ್​ ಜಿಲ್ಲೆಯಲ್ಲಿ ಮೂವರು ಮಹಿಳೆಯರು ಯುವಕನೊಬ್ಬನನ್ನು ಅಪಹರಣ ಮಾಡಿ ಆತನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳುವ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.

ಮೂವರು ಮಹಿಳೆಯರು ಯುವಕನಿಗೆ ಪಾನೀಯದಲ್ಲಿ ವಯಾಗ್ರ ಮಾತ್ರೆ ಬೆರೆಸಿ ಕುಡಿಸಿ ಆತನನ್ನು ಕಾರಿನಲ್ಲಿ ಅಪಹರಣ ಮಾಡಿದ್ದರು. ನಿರ್ಜನ ಪ್ರದೇಶದಲ್ಲಿ ಆತನ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಪೋಸ್ಟ್​ನಲ್ಲಿ ಬರೆದುಕೊಳ್ಳಲಾಗಿತ್ತು. ಆದರೆ ಆ ಪೋಸ್ಟ್​ ನಿಜವಾದುದು ಅಲ್ಲ. ತೆಲಂಗಾಣದಲ್ಲಿ ಮಹಿಳೆಯರು ಯುವಕನನ್ನು ಅಪಹರಣ ಮಾಡಿ ಅತ್ಯಾಚಾರ ಎಸಗಿರುವ ಘಟನೆಗಳು ವರದಿಯಾಗಿಲ್ಲ ಎಂದು ಫ್ಯಾಕ್ಟ್​ಚೆಕ್​ನಿಂದ ತಿಳಿದುಬಂದಿದೆ.

ವಿ ಆರ್ ವಾಚಿಂಗ್ ಯು ನ್ಯೂಸ್ ಎಂಬ ಫೇಸ್‌ಬುಕ್ ಪುಟದಲ್ಲಿ ವ್ಯಕ್ತಿಯ ಚಿತ್ರವೊಂದನ್ನು ಪೋಸ್ಟ್ ಮಾಡಿ. ಅತ್ಯಾಚಾರದ ಘಟನೆಯನ್ನು ವಿವರಿಸಲಾಗಿದೆ. ತೆಲಂಗಾಣದಲ್ಲಿ ಮೂರು ದಿನಗಳ ಕಾಲ ಮೂರು ಮಹಿಳೆಯರಿಂದ ಯುವಕನನ್ನು ಅಪಹರಿಸಿ ಅತ್ಯಾಚಾರ ಮಾಡಲಾಗಿದೆ ಎಂದು ಪೋಸ್ಟ್​ ಮಾಡಲಾಗಿತ್ತು.

ಫ್ಯಾಕ್ಟ್​ಚೆಕ್​: ಇಂಡಿಯಾ ಟುಡೆ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (ಎಎಫ್‌ಡಬ್ಲ್ಯೂಎ) ಈ ಫೋಸ್ಟ್​ ನಕಲಿ ಎಂದು ಪತ್ತೆ ಮಾಡಿದೆ. ವೈರಲ್​ ಆಗಿರುವ ಪೋಸ್ಟ್​ಗೂ ತೆಲಂಗಾಣಕ್ಕೂ ಯಾವುದೇ ಸಂಬಂಧವಿಲ್ಲ. ಎರಡು ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದಲ್ಲಿ ನಡೆದಿರುವ ಘಟನೆಯನ್ನು ತೆಲಂಗಾಣದಲ್ಲಿ ನಡೆದಿದೆ ಎಂದು ಪೋಸ್ಟ್​ ಮಾಡಿರುವುದು ಪತ್ತೆಯಾಗಿದೆ.

ಕೀವರ್ಡ್ ಹುಡುಕಾಟ ನಡೆಸಿದಾಗ, ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದಲ್ಲಿ 2017 ರಲ್ಲಿ ಘಟನೆ ನಡೆದಿದೆ. ಈ ಘಟನೆಯನ್ನು ಗ್ಯಾಂಗ್ ರೇಪ್ ಹಾರ್ರರ್ ಎಂಬ ಶೀರ್ಷಿಕೆ ಬಳಸಿ ದಿ ಸನ್ ಅಂತಾರಾಷ್ಟ್ರೀಯ ಮಾಧ್ಯಮ ಸೇರಿದಂತೆ ಇತರೆ ಟಿವಿಗಳು ಪ್ರಸಾರ ಮಾಡಿದ್ದವು.

ಮೂರು ಮಹಿಳೆಯರು ಪುರುಷರ ಮೇಲೆ ಅತ್ಯಾಚಾರ ನಡೆಸಿದ್ದರು. 23 ದಿನಗಳ ಕಾಲ ಯುವಕನನ್ನು ಟ್ಯಾಕ್ಸಿಯಲ್ಲಿ ಸುತ್ತಾಡಿಸಿದ್ದರು. ನಂತರ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ಎಸಗಿದ್ದಾರೆ ಎಂದು ಬರೆಯಲಾಗಿತ್ತು.

ರಿವರ್ಸ್ ಇಮೇಜ್ ಹುಡುಕಾಟದ ಸಹಾಯದಿಂದ, ವೈರಲ್ ಪೋಸ್ಟ್​ನಲ್ಲಿ ಬಳಸಲಾದ ಚಿತ್ರವು ಪುಣೆಯ ವ್ಯಕ್ತಿಯಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ತನ್ನ ಕುಟುಂಬದ 14 ಸದಸ್ಯರನ್ನು ಕೊಂದಿದ್ದ. ಈ ಘಟನೆ ಮೂರು ವರ್ಷಗಳ ಹಿಂದೆ ನಡೆದಿತ್ತು. ಈಗ ಇದನ್ನು ವೈರಲ್​ ಆದ ಪೋಸ್ಟ್​ಗೆ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಕಂಡು ಬಂದಿದೆ.

ತೆಲಂಗಾಣದಲ್ಲಿ ಮೂರು ದಿನಗಳ ಕಾಲ ಒಬ್ಬ ಪುರುಷ ಮೂರು ಮಹಿಳೆಯರಿಂದ ಅತ್ಯಾಚಾರಕ್ಕೊಳಗಾದ ಯಾವುದೇ ಘಟನೆ ನಮಗೆ ಸಿಗಲಿಲ್ಲ. ಆದ್ದರಿಂದ, ವೈರಲ್ ಪೋಸ್ಟ್ ತಪ್ಪುದಾರಿಗೆಳೆಯುತ್ತಿದೆ ಎಂಬುದು ಸ್ಪಷ್ಟವಾಗಿದೆ. ಈ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದು, ಚಿತ್ರಕ್ಕೂ ಈ ಘಟನೆಗೆ ಸಂಬಂಧಿಸಿಲ್ಲ.

Comments are closed.