ರಾಷ್ಟ್ರೀಯ

ಕನ್ನಡ ಭಾಷೆ ಒಳಗೊಂಡಂತೆ 9 ಭಾಷೆಗಳಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ಲಭ್ಯ

Pinterest LinkedIn Tumblr


ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ ತೀರ್ಪು ಕನ್ನಡ ಸೇರಿದಂತೆ ಒಂಬತ್ತು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಾಗುತ್ತಿದೆ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್‌ ತಿಳಿಸಿದ್ದಾರೆ.

ರಾಜ್ಯಸಭೆಯಲ್ಲಿ ಗುರುವಾರ ಶೂನ್ಯ ವೇಳೆಯಲ್ಲಿ ಮಾತನಾಡಿದ ಸಚಿವರು, ”ತೀರ್ಪಿನ ಭಾಷಾಂತರಕ್ಕಾಗಿ ಕೃತಕ ಬುದ್ಧಿಮತ್ತೆ ನೆರವಿನ ಸುಪ್ರೀಂಕೋರ್ಟ್‌ ವಿಧಿಕ್‌ ಅನುವಾದ್‌ ಸಾಫ್ಟ್‌ವೇರ್‌ (ಸುವಾಸ್‌) ಎಂಬ ತಂತ್ರಾಂಶ ರೂಪಿಸಲಾಗಿದೆ.

ಕಳೆದ ನವೆಂಬರ್‌ 26ರಿಂದ ಸಾಫ್ಟ್‌ವೇರ್‌ ಬಳಕೆ ಚಾಲ್ತಿಯಲ್ಲಿದೆ. ಸದ್ಯ ಕನ್ನಡ, ತಮಿಳು, ತೆಲುಗು, ಮರಾಠಿ, ಅಸ್ಸಾಮಿ, ಬೆಂಗಾಲಿ, ಒಡಿಯಾ, ಹಿಂದಿ ಮತ್ತು ಉರ್ದು ಭಾಷೆಗಳಲ್ಲಿತೀರ್ಪಿನ ಅನುವಾದಿದ ಪ್ರತಿಗಳನ್ನು ಪಡೆಯಬಹುದು,” ಎಂದು ಮಾಹಿತಿ ನೀಡಿದರು.

ಕಾರ್ಮಿಕ, ಬಾಡಿಗೆ, ಭೂಸ್ವಾಧೀನ ಮತ್ತು ಪರಿಹಾರ, ಕೌಟುಂಬಿಕ ಕಾನೂನುಗಳು, ಸಾಮಾನ್ಯ ಕಾಯಿದೆಗಳು, ವೈಯಕ್ತಿಕ ಕಾನೂನು, ಧಾರ್ಮಿಕ ಮತ್ತು ದತ್ತಿ ಕಾಯಿದೆ, ಭೂ ಒಡೆತನ, ಗ್ರಾಹಕ ರಕ್ಷಣೆಗೆ ಸಂಬಂಧಿಸಿದ ಪ್ರಕರಣಗಳ ತೀರ್ಪು ಮಾತ್ರವೇ ಅನುವಾದವಾಗುತ್ತಿದೆ. ಈ ವ್ಯವಸ್ಥೆಯನ್ನು ಎಲ್ಲಕಾಯಿದೆ ಹಾಗೂ ಎಲ್ಲಪ್ರಾದೇಶಿಕ ಭಾಷೆಗಳಿಗೂ ವಿಸ್ತರಿಸುವ ಉದ್ದೇಶವಿದೆ ಎಂದೂ ಸಚಿವರು ತಿಳಿಸಿದರು.

Comments are closed.