ಕರಾವಳಿ

ತುಳು ಜೋಕುಲೆ ಕೂಟ ಮಂಗಳೂರು ವತಿಯಿಂದ ‘ಇಲ್ಲಾ ಜಾಲ್‌ಡ್ ಪಾತೆರಕತೆ’ ಕಾರ್ಯಕ್ರಮ

Pinterest LinkedIn Tumblr

ತುಳು ಭಾಷೆ ಕಟ್ಟುವಲ್ಲಿ ಯುವ ಪರಂಪರೆ ಸಕ್ರೀಯವಾಗಬೇಕು : ಡಾ. ಪುರುಷೋತ್ತಮ ಬಿಳಿಮಲೆ

ಮಂಗಳೂರು : ನಮ್ಮ ದೇಶದ ಪರಂಪರೆಯಲ್ಲಿ ಬಹುತ್ವದ ಕಲ್ಪನೆ, ವಿವಿಧ ಸಂಸ್ಕೃತಿಗಳು ಇದ್ದು, ಭಾಷೆ, ಸಂಸ್ಕೃತಿ, ಆಚರಣೆಗಳು ಭಿನ್ನವಾಗಿದ್ದರೂ, ಸೌರ್ಹಾಧತೆ, ಸಾಮರಸ್ಯ ಆಡಗಿದೆ, ಅದೇ ಈ ದೇಶದ ವಿಶೇಷತೆ. ರಂಗೋಲಿಯು ವಿವಿಧ ಬಣ್ಣಗಳಿಂದ ಮಿಂಚುವಂತೆ, ಎಲ್ಲಾ ಭಾಷೆಗಳು ಸೇರಿ ದೇಶ ಪ್ರಜ್ವಲಿಸುತ್ತಿದೆ. ತುಳು ಭಾಷೆ ನಕ್ಷತ್ರದಂತೆ ಮಿನುಗುತ್ತಿದ್ದು, ತುಳು ಭಾಷೆ, ಸಂಸ್ಕೃತಿಯನ್ನು ಕಟ್ಟುವಲ್ಲಿ ಯುವ ಪರಂಪರೆ ಸಕ್ರೀಯವಾಗಿ ತೊಡಗಿಕೊಳ್ಳಬೇಕು, ಎಲ್ಲಾ ಭಾಷೆಗಳಿಗೆ ಸಮಾನ ಅವಕಾಶ ಸಿಗಬೇಕು, ತುಳು ಭಾಷಾಧ್ಯಯನ ಮತ್ತು ಸಂಶೋಧನೆಗಳಿಗೆ ಸರಕಾರ ಆಡಳಿತ ವ್ಯವಸ್ಥೆ ಹೆಚ್ಚು ಒತ್ತು ನೀಡಬೇಕು ಎಂದು ಜಾನಪದ ಸಂಶೋಧಕ ಹಾಗೂ ದೆಹಲಿ ಜೆ.ಎನ್.ಯು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು.

ಅವರು ತುಳು ನಾಡು ನುಡಿ ಭಾಷೆಯ ಬೆಳವಣಿಗೆಗೆ ಶ್ರಮಿಸುವ ನೆಲೆಗಟ್ಟಿನಲ್ಲಿ ಸಂಘಟಿತವಾದ ತುಳು ಜೋಕುಲೆ ಕೂಟ ಮಂಗಳೂರು ವತಿಯಿಂದ ಗಣೇಶ್ ಸಂಕೀರ್ಣ ಬೆಂದೂರುವೆಲ್‌ನಲ್ಲಿ ನಡೆದ ‘ ಇಲ್ಲಾ ಜಾಲ್‌ಡ್ ಪಾತೆರಕತೆ ‘ ಎಂಬ ಕಾರ್ಯಕ್ರಮದಲ್ಲಿ ತುಳು ಭಾಷಾ ಆಧ್ಯನಾಸಕ್ತರನ್ನುದ್ಧೇಶಿಸಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ತುಳು ಭಾಷೆ, ಸಂಶೋಧನೆ, ತುಳುನಾಡ ಕುಟುಂಬ ಬಳಿ ಪದ್ಧತಿ, ಆರಾಧನ ಸಂಸ್ಕೃತಿ, ಧಾರ್ಮಿಕ ಸಾಮರಸ್ಯ, ತುಳು ಆಚರಣೆ, ತುಳು ಸಂಶೋಧನೆಯ ಸಾಧ್ಯತೆಗಳ ಕುರಿತು ಉಪನ್ಯಾಸವನ್ನು ಅವರು ನೀಡಿದರು, ನಂತರ ಸಂವಾದ ನಡೆಸಲಾಯಿತು.

ಹಿರಿಯ ಲೇಖಕರು, ಜಾನಪದ ಸಂಶೋಧಕ, ನಿವೃತ್ತ ಪ್ರಾಧ್ಯಾಪಕರಾದ ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರೊಂದಿಗೆ ಮಾತುಕತೆ ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ತುಳು ಜೋಕುಲೆ ಕೂಟ ಮಂಗಳೂರುನ ಸದಸ್ಯರುಗಳು, ವಿವಿಧ ಕಾಲೇಜಿನ ಪ್ರಾಧ್ಯಾಪಕರುಗಳು, ವಿದ್ಯಾರ್ಥಿಗಳು, ಸಮಾನ ಮನಸ್ಕ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ತುಳು ಭಾಷಾ ಅಧ್ಯಯನಾಸ್ತಕರು ಭಾಗವಹಿಸಿದ್ದರು.

Comments are closed.