
ಕನ್ನಡದ ಬಿಗ್ಗೆಸ್ಟ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 6 ಶೋ ವಿನ್ನರ್ ಶಶಿ ಕುಮಾರ್ ಈಗ ಎಲ್ಲಿದ್ದಾರೆ ಎಂಬ ಪ್ರಶ್ನೆಗಳು ಹೊಸ ಬಿಗ್ ಬಾಸ್ 7 ಆವೃತ್ತಿಯ ವೇಳೆ ತುಸು ಜೋರಾಗಿಯೇ ಕೇಳಿ ಬಂದಿತ್ತು.
ಬಿಗ್ ಬಾಸ್ ಮನೆಯಲ್ಲಿ ಮಾರ್ಡನ್ ರೈತ ಎಂದೇ ಖ್ಯಾತಿ ಪಡೆದಿದ್ದ ಶಶಿ ಕುಮಾರ್ ಸೆಲೆಬ್ರಿಟಿಗಳನ್ನು ಹಿಂದಿಕ್ಕಿ ಬಿಗ್ ಬಾಸ್ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದರು.
ಹೀಗಾಗಿಯೇ ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಬಳಿಕ ಶಶಿ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ಎಂದೇ ಹೇಳಲಾಗಿತ್ತು.
ಆದರೆ ಒಂದಷ್ಟು ದಿನಗಳು ಅಲ್ಲಿ ಇಲ್ಲಿ ಕಾಣಿಸಿಕೊಂಡಿದ್ದ ಶಶಿ ಕುಮಾರ್ ಆ ಬಳಿಕ ತೆರೆ ಹಿಂದೆ ಸರಿದಿದ್ದರು. ಅದರಲ್ಲೂ ಅವಕಾಶ ಸಿಕ್ಕರೆ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದಾಗಿ ಹೇಳಿದ್ದರು.
ಆಮೇಲೇನಾಯ್ತು ಗೊತ್ತಿಲ್ಲ. ಶಶಿ ಯಾವುದೇ ಸಿನಿಮಾ ಮುಹೂರ್ತದಲ್ಲಿ ಕಾಣಿಸಿಕೊಂಡಿರಲಿಲ್ಲ. ಅತ್ತ ಕೃಷಿಯತ್ತ ಮುಖ ಮಾಡಿದ್ದ ಮಾರ್ಡನ್ ರೈತ ಕೆಲ ತಿಂಗಳ ಹಿಂದೆ ಅಭಿಯಾನವೊಂದರಲ್ಲಿ ಭಾಗವಹಿಸಿದ್ದರು.
ಹೌದು, ಕಾವೇರಿ ಕಾಲಿಂಗ್ ಅಭಿಯಾನದ ಭಾಗವಾಗಿದ್ದ ಶಶಿ ಕುಮಾರ್ ಇದೀಗ ವರ್ಷಗಳ ಬಳಿಕ ಮತ್ತೆ ಬಣ್ಣದ ಲೋಕಕ್ಕೆ ಮರಳುತ್ತಿದ್ದಾರೆ.
‘ಬ್ಯೂಟಿಫುಲ್ ಮನಸುಗಳು’, ‘ನೀರ್ದೋಸೆ’ ಚಿತ್ರಗಳ ನಿರ್ಮಾಪಕ ಪ್ರಸನ್ನ ಅವರು ನಿರ್ಮಿಸಲಿರುವ ಹೊಸ ಚಿತ್ರದಲ್ಲಿ ಶಶಿ ಕುಮಾರ್ ನಾಯಕರಾಗಲಿದ್ದಾರೆ.
ಶಶಿ ಕುಮಾರ್ಗೆ ಜೋಡಿಯಾಗಿ ‘ಗೊಂಬೆಗಳ ಲವ್’ ಖ್ಯಾತಿಯ ನಟಿ ಪಾವನಾ ಬಣ್ಣ ಹಚ್ಚುತ್ತಿದ್ದಾರೆ.
ಈ ಚಿತ್ರಕ್ಕೆ ‘ಮೆಹಬೂಬ’ ಎಂದು ಶೀರ್ಷಿಕೆ ಫಿಕ್ಸ್ ಮಾಡಲಾಗಿದ್ದು, ‘ಕಥಾವಿಚಿತ್ರ’ ಖ್ಯಾತಿಯ ಅನೂಪ್ ನಿರ್ದೇಶನ ಮಾಡಲಿದ್ದಾರೆ.
ಇದೊಂದು ಪಕ್ಕಾ ಎಮೋಷನಲ್ ಲವ್ಸ್ಟೋರಿ. ಎರಡು ಧರ್ಮದ ಹುಡುಗ-ಹುಡುಗಿಯ ನಡುವೆ ನಡೆಯುವ ಪ್ರೇಮಕಥೆ. ಕೇರಳದಲ್ಲಿ ನಡೆದ ನೈಜ ಘಟನೆಯನ್ನು ಇಲ್ಲಿನ ನೇಟಿವಿಟಿಗೆ ತಕ್ಕಂತೆ ಬದಲಿಸಿ ಚಿತ್ರಕಥೆ ರೂಪಿಸಲಾಗಿದೆ ಎಂದು ಚಿತ್ರತಂಡ ತಿಳಿಸಿದೆ.
ಶಶಿ ಕುಮಾರ್ ರಿ ಎಂಟ್ರಿ ಕೊಡಲಿರುವ ಈ ಚಿತ್ರದಲ್ಲಿ ಮ್ಯಾಥ್ಯೂ ಮನು ಸಂಗೀತ, ಕಿರಣ್ ಹಂಪಾಪುರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ ಇರಲಿದ್ದು, ಚಿತ್ರದ ಮುಹೂರ್ತ ಇದೇ ತಿಂಗಳ 11 ರಂದು ನಡೆಯಲಿದೆ.
Comments are closed.