ರಾಷ್ಟ್ರೀಯ

ಐಟಿಬಿಪಿ ಸಿಬ್ಬಂದಿ ನಡುವೆಯೇ ಗುಂಡಿನ ಚಕಮಕಿ : ಐವರು ಯೋಧರು ಮೃತ್ಯು

Pinterest LinkedIn Tumblr

ರಾಯ್‍ಪುರ್: ಇಂಡೋ ಬಾರ್ಡರ್ ಟಿಬೆಟಿಯನ್ ಪೊಲೀಸ್ (ಐಟಿಬಿಪಿ) ಸಿಬ್ಬಂದಿ ನಡುವೆಯೇ ನಡೆದ ಗುಂಡಿನ ಚಕಮಕಿಯಲ್ಲಿ ಐವರು ಯೋಧರು ಹತರಾಗಿ , ಇತರ ಮೂವರು ತೀವ್ರ ಗಾಯಗೊಂಡಿರುವ ಘಟನೆ ಛತ್ತೀಸ್‍ಗಢದ ನಾರಾಯಣಪುರ ಜಿಲ್ಲೆಯಲ್ಲಿ ನಡೆದಿದೆ.

ನಾರಾಯಣಪುರ ಜಿಲ್ಲೆಯ 45ನೇ ಐಟಿಬಿಪಿ ಬೆಟಾಲಿಯನ್ ಶಿಬಿರ ಇರುವ ಕಡೇನರ್‍ನಲ್ಲಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್ ಮಹಾನಿರೀಕ್ಷಕ (ಬಸ್ತಾರ್‍ವಲಯ) ಪಿ.ಸುಂದರರಾಜ್ ತಿಳಿಸಿದ್ದಾರೆ.

ಐಟಿಪಿಬಿ ಸಿಬ್ಬಂದಿ ನಡುವೆ ಭುಗಿಲೆದ್ದ ಘರ್ಷಣೆ ಹಿಂಸಾಚಾರಕ್ಕೆ ತಿರುಗಿ ಯೋಧನೊಬ್ಬ ತನ್ನ ಸರ್ವೀಸ್ ರೈಫಲ್‍ನಿಂದ ಗುಂಡು ಹಾರಿಸಿದ ಪರಿಣಾಮ ನಾಲ್ವರು ಯೋಧರು ಹತರಾಗಿ, ಮೂವರು ತೀವ್ರಗಾಯಗೊಂಡರು. ಬಳಿಕ ಮತ್ತೊಬ್ಬಯೋಧ ಗುಂಡು ಹಾರಿಸಿ ಆತನನ್ನು ಕೊಂದ ಎಂದು ಸುಂದರರಾಜ್ ತಿಳಿಸಿದ್ದಾರೆ.

ಈ ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ನಾರಾಯಣಪುರ ಪೊಲೀಸ್ ವರಿಷ್ಠಾಧಿಕಾರಿ ಮೋಹಿತ್‍ಗರ್ಗ್ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಈ ಹತ್ಯಾಕಾಂಡದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

Comments are closed.