ಕರಾವಳಿ

ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿಯವರಿಂದ ಬೋಳೂರು – ಮಠದ ಕಣಿ ಪರಿಸರದಲ್ಲಿ ಮನೆ ಮನೆ ಭೇಟಿ

Pinterest LinkedIn Tumblr

ಮಂಗಳೂರು : ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ ಮಂಗಳೂರು ಇದರ ವತಿಯಿಂದ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠಾಧಿಪತಿ ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿಯವರಿಂದ ಗುರುಸ್ಪಂದನ (ಮನೆ ಮನೆ ಭೇಟಿ ) ಧರ್ಮ ಜಾಗೃತಿ ಅಭಿಯಾನ ಕಾರ್ಯಕ್ರಮ ಮಂಗಳೂರಿನ ಬೋಳೂರು – ಮಠದ ಕಣಿ ಪರಿಸರದಲ್ಲಿ ಇರುವ ವಿಶ್ವಬ್ರಾಹ್ಮಣ ಸಮಾಜ ಬಾಂಧವರ ಮನೆಗಳಲ್ಲಿ ಜರಗಿತು.

ಮಂಗಳೂರಿನ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ ಕೇಶವ ಆಚಾರ್ಯ ಆಚಾರ್ಯ ಮೊಕ್ತೇಸರರಾದ ಸುಂದರ ಆಚಾರ್ಯ ಬೆಳುವಾಯಿ ಲೋಕೇಶ್ ಆಚಾರ್ಯ ಬಿಜೈ ಕ್ಷೇತ್ರದ ಆಡಳಿತ ಮಂಡಳಿ ಸದಸ್ಯರು ಗುರುಸೇವಾ ಪರಿಷತ್ತಿನ ಸದಸ್ಯರು ಶ್ರೀಮತ್ ಆನೆಗುಂದಿ ಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನದ ಅಧ್ಯಕ್ಷರಾದ ಸೂರ್ಯ ಕುಮಾರ್ ಹಾಗು ಅನೇಕ ಭಕ್ತಾದಿಗಳು ಈ ಸಂದರ್ಭ ಉಪಸ್ಥಿತರಿದ್ದರು.

Comments are closed.