ಕುಂದಾಪುರ: ಆಹಾರವರಸಿ ಜನವಸತಿ ಪ್ರದೇಶವಿರುವೆಡೆ ಬಂದ ಚಿರತೆಯೊಂದು ಗದ್ದೆ ಸಮೀಪದಲ್ಲಿ ಅಳವಡಿಸಿದ ತಂತಿ ಬೇಲಿಯ ಬಲೆಗೆ ಸಿಕ್ಕು ಸಾವನ್ನಪ್ಪಿದ ಘಟನೆ ಬೈಂದೂರು ತಾಲೂಕಿನ ಗೋಳಿಹೊಳೆ ಸಮೀಪದ ವನದಲಸು ಎಂಬಲ್ಲಿ ನ.30 ಶನಿವಾರ ಮುಂಜಾನೆ ನಡೆದಿದೆ.


ಅಂದಾಜು 2 ವರ್ಷ ಪ್ರಾಯದ ಹೆಣ್ಣು ಚಿರತೆಯಾಗಿದ್ದು ಆಹಾರವರಸಿ ಬಂದಿರಬಹುದೆಂದು ಶಂಕಿಸಲಾಗಿದೆ. ಇಲ್ಲಿನ ಗದ್ದೆಗಳ ಬಳಿ ಬಲೆಯ ಬೇಲಿ ಮಾಡಿದ್ದು ಚಿರತೆ ಹಿಂಬದಿಯ ಕಾಲಿಗೆ ತಂತಿ ಬೀಲಿ ಸಿಲುಕಿದೆ. ಇದರಿಂದ ತಪ್ಪಿಸಿಕೊಳ್ಳಲಾಗದೇ ಒದ್ದಾಡಿದ ಚಿರತೆ ಅಲ್ಲಿಯೇ ಪ್ರಾಣ ಬಿಟ್ಟಿದೆಯೆಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಚಿರತೆಯ ಮರಣೋತ್ತರ ಪರೀಕ್ಷೆಯನ್ನು ಕೂಡ ನಡೆಸಲಾಗಿದೆ.
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಮಲಾ ಕೆ., ಕುಂದಾಪುರ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ. ಲೋಹಿತ್, ಬೈಂದೂರಿನ ಪ್ರಭಾರ ವಲಯ ಅರಣ್ಯಾಧಿಕಾರಿ ಪ್ರಭಾಕರ್ ಕುಲಾಲ್, ಉಪ ವಲಯ ಅರಣ್ಯಾಧಿಕಾರಿ, ಅರಣ್ಯ ರಕ್ಷಕರು, ವೀಕ್ಷಕರು ಭೇಟಿ ನೀಡಿದ್ದರು.
(ವರದಿ- ಯೋಗೀಶ್ ಕುಂಭಾಸಿ)
Comments are closed.