
ಶಿವಪುರಿ: ದೇಶದಾದ್ಯಂತ ಈರುಳ್ಳಿ ಬೆಲೆ ಗಗನಕ್ಕೇರಿದೆ. ಬೆಲೆಯಲ್ಲಿ ಈಗಾಗಲೇ ಶತಕ ಪೂರೈಸಿರುವ ಈರುಳ್ಳಿ ಕೊಳ್ಳುವವರ ಕಣ್ಣಲ್ಲಿ ನೀರು ತರಿಸುತ್ತಿದೆ. ಆದರೆ ಲಾರಿಯಲ್ಲಿ ಸುಮಾರು 20 ಲಕ್ಷ ರೂಪಾಯಿಯ ಈರುಳ್ಳಿಯನ್ನು ಸಾಗಿಸುತ್ತಿದ್ದ ವೇಳೆ ಈರುಳ್ಳಿ ಮತ್ತು ಲಾರಿಯನ್ನೇ ಕದ್ದ ಘಟನೆ ನಾಶಿಕ್- ಗೋರಖ್ ಪುರ ದಾರಿಯಲ್ಲಿ ನಡೆದಿದೆ.
ನಾಶಿಕ್ ನ ಪ್ರೇಮ್ ಚಂದ್ ಶುಕ್ಲಾ ಎಂಬ ವ್ಯಾಪಾರಿ ಗೋರಖ್ ಪುರದ ಟ್ರಾನ್ಸ್ ಪೋರ್ಟ್ ಕಂಪೆನಿ ವಿರುದ್ದ ದೂರು ನೀಡಿದ್ದಾರೆ.
ಗೋರಖ್ ಪುರದಿಂದ ಹೊರಟಿದ್ದ ಲಾರಿಯಲ್ಲಿ 20 ಲಕ್ಷ ರೂಪಾಯಿ ಮೌಲ್ಯದ ಈರುಳ್ಳಿ ತುಂಬಲಾಗಿತ್ತು. ಆದರೆ ಸರಿಯಾದ ದಿನಕ್ಕೆ ಗಮ್ಯ ಸ್ಥಳಕ್ಕೆ ತಲುಪದೆ ಚಾಲಕ ಮತ್ತು ಲಾರಿ ಎರಡೂ ನಾಪತ್ತೆಯಾದ ಘಟನೆ ನಡೆದಿತ್ತು.
ಆದರೆ ಪ್ರಕರಣದ ದೂರು ಪಡೆದ ಶಿವಪುರಿ ಪೊಲೀಸರು ಲಾರಿಯನ್ನು ಶಿವಪುರಿಯಲ್ಲಿ ಪತ್ತೆ ಹಚ್ಚಿದ್ದಾರೆ ಆದರೆ ಲಾರಿ ಖಾಲಿಯಾಗಿತ್ತು!
Comments are closed.