
ಆಂಧ್ರಪ್ರದೇಶ: ಟಿಕ್ ಟಾಕ್ ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದಕ್ಕೆ ತನ್ನ ಪತ್ನಿಯನ್ನೇ ಹತ್ಯೆಗೈದ ವಿಚಿತ್ರ ಘಟನೆ ವಿಜಯವಾಡದಲ್ಲಿ ನಡೆದಿದೆ.
ನವೆಂಬರ್ 17 ರಂದು ಈ ಘಟನೆ ನಡೆದಿದ್ದು ಪೊಲೀಸರ ಸತತ ವಿಚಾರಣೆಯ ನಂತರ ಪತಿ ನರಸಯ್ಯ ಈ ಕುರಿತು ಮಾಹಿತಿ ನೀಡಿದ್ದಾನೆ. 27 ವರ್ಷದ ನರಸಯ್ಯ ತನ್ನ ಅಣ್ಣ ಸಿದ್ದಲ ಚಿನ್ನ ವೆಂಕಯ್ಯನ ಜೊತೆ ಸೇರಿಕೊಂಡು ಹೆಂಡತಿಯನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಆದದ್ದೇನು :
ನರಸಯ್ಯ ಮತ್ತು ಆತನ ಹೆಂಡತಿಯ ಮಧ್ಯೆ ಕೌಟುಂಬಿಕ ಕಲಹ ಪ್ರತಿನಿತ್ಯ ನಡೆಯುತ್ತಿತ್ತು. ಇದರಿಂದ ಬೇಸರ ಕಳೆಯಲು ಆಕೆ ಸದಾ ಟಿಕ್ ಟಾಕ್ ವಿಡಿಯೋಗಳನ್ನು ಮಾಡಿ ಅಪ್ಲೋಡ್ ಮಾಡುತ್ತಿದ್ದಳು. ಇದು ಗಂಡ ನರಸಯ್ಯನಿಗೆ ಇರಿಸುಮುರಿಸಾಗಿದ್ದು ಅಪ್ಲೋಡ್ ಮಾಡದಂತೆ ತಿಳಿಹೇಳುತ್ತಿದ್ದ. ಆದರೇ ಗಂಡನಿಗೆ ಇಷ್ಟವಿಲ್ಲ ಎಂಬುದರಿತು ಇನ್ನು ಹೆಚ್ಚೆಚ್ಚು ವಿಡಿಯೋಗಳನ್ನು ಆಕೆ ಅಪ್ಲೋಡ್ ಮಾಡುತ್ತಿದ್ದಳು ಮಾತ್ರವಲ್ಲದೆ ವಿಚ್ಚೇದನ ನೀಡುವುದಾಗಿ ಹೆದರಿಸಿದ್ದಳು.
ಇದರಿಂದ ರೊಚ್ಚಿಗೆದ್ದ ಗಂಡ ನರಸಯ್ಯ ನ.17 ರಂದು ಅಣ್ಣನೊಂದಿಗೆ ಸೇರಿಕೊಂಡು ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ನಂತರ ಊರ ಹೊರಗಿನ ಸ್ಮಶಾನಕ್ಕೆ ಶವವನ್ನು ತೆಗೆದುಕೊಂಡು ಹೋಗಿ ಪೆಟ್ರೋಲ್ ನಿಂದ ಸುಟ್ಟಿದ್ದಾರೆ.
ಅರೆಬರೆ ಸುಟ್ಟಿದ್ದ ಶವದ ಕುರಿತು ತನಿಖೆ ಆರಂಭಿಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿ ಆರೋಪಿಗಳನ್ನು ಬಂಧಿಸಿದ್ಧಾರೆ.
Comments are closed.