
ಖ್ಯಾತ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಂ ಸರ್ವರ್ ವಿಶ್ವದಾದ್ಯಂತ ಡೌನ್ ಆಗಿದ್ದು, ಉಭಯ ತಾಣಗಳ ಸೇವೆ ಮಧ್ಯಾಹ್ನದಿಂದ ನಿಧಾನಗೊಂಡಿದೆ. ಡೌನ್ ಡಿಟೆಕ್ಟರ್ ವರದಿ ಪ್ರಕಾರ, ಈ ಸಮಸ್ಯೆ ಮಧ್ಯಾಹ್ಬ 2:15 ರಿಂದ ಕಾಣಿಸಿಕೊಂಡಿದ್ದು, ಐರೋಪ್ಯ ರಾಷ್ಟ್ರಗಳ ಬಳಕೆದಾರರಿಗೆ ಈ ತೊಂದರೆ ಹೆಚ್ಚಾಗಿ ಕಾಣಿಸಿಕೊಂಡಿದೆ ಎಂದು ತಿಳಿಸಿದೆ.
ಇನ್ನು ಬಳಕೆದಾರರು ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಶೇ. 74 ಇನ್‌ಸ್ಟಾಗ್ರಾಮ್ ಬಳಕೆದಾರರಿಗೆ ನ್ಯೂಸ್ ಫೀಡ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಹಾಗೆಯೇ 14% ಸ್ಟೋರಿ ಅಪ್‌ಲೋಡ್ ವೇಳೆ ತೊಂದರೆಯಾಗಿದೆ ಎಂದಿದ್ದಾರೆ. ಇನ್ನು ಶೇ. 10 ರಷ್ಟು ಜನರು ಇನ್ಸ್ಟಾಗ್ರಾಂ ವೆಬ್‌ಸೈಟ್ ಬಳಕೆ ವೇಳೆ ಸಮಸ್ಯೆಗಳನ್ನು ತಲೆದೂರಿದೆ ಎಂದು ತಿಳಿಸಿದ್ದಾರೆ.
ಅದೇ ರೀತಿ ಫೇಸ್‌ಬುಕ್‌ನಲ್ಲಿ 65% ಜನರು ಲಾಗ್-ಇನ್ ಆಗಲು ಹೆಣಗಾಡಿದ್ದಾರೆ. ಇನ್ನು 22% ಜನರು ಫೋಟೋಗಳನ್ನು ವೀಕ್ಷಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ತಿಳಿಸಿದ್ದಾರೆ. ಅದೇ ರೀತಿ 11% ರಷ್ಟು ಜನರ ಫೇಸ್‌ಬುಕ್ ಸಂಪೂರ್ಣ ಸ್ಥಗಿತವಾಗಿದ್ದಾಗಿ ಹೇಳಿಕೊಂಡಿದ್ದಾರೆ. ಈ ಸಮಸ್ಯೆಗೆ ಕಾರಣವೇನು? ಸರ್ವರ್ ಡೌನ್ ಆಗಿತ್ತಾ ಎಂಬುದರ ಬಗ್ಗೆ ಇನ್ನು ಕೂಡ ಫೇಸ್‌ಬುಕ್ ಇಂಕ್ ಸಂಸ್ಥೆ ಯಾವುದೇ ಅಧಿಕೃತ ಮಾಹಿತಿ ಪ್ರಕಟಿಸಿಲ್ಲ.
ಕಳೆದ ಜುಲೈ ತಿಂಗಳಲ್ಲೂ ಕೂಡ ಫೇಸ್‌ಬುಕ್, ಟ್ವಿಟರ್ ಸೇರಿದಂತೆ ವಿಶ್ವದಾದ್ಯಂತ ಸೋಷಿಯಲ್ ನೆಟ್ವರ್ಕ್ ಸರ್ವರ್ ಡೌನ್ ಆಗಿತ್ತು. ಇದರಿಂದ ಫೋಟೊ ಅಪ್‌ಲೋಡ್, ಡೌನ್ ಲೋಡ್‌ನಂತಹ ಸೇವೆ ನಿಧಾನಗೊಂಡಿತ್ತು. ಈ ಬಗ್ಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಇದೀಗ ಮತ್ತೊಮ್ಮೆ ಫೇಸ್‌ಬುಕ್, ಇನ್ಸ್ಟಾಗ್ರಾಂ ಸರ್ವರ್ ಡೌನ್ ಆಗಿರುವುದು ಸೋಷಿಯಲ್ ಮೀಡಿಯಾ ಬಳಕೆದಾರರ ಆತಂಕಕ್ಕೆ ಕಾರಣವಾಗಿದೆ. ಏಕೆಂದರೆ ದಿನಗಳ ಹಿಂದೆಯಷ್ಟೇ ಫೇಸ್‌ಬುಕ್ ಇಂಕ್ ಸಂಸ್ಥೆ ವಾಟ್ಸ್ಆ್ಯಪ್ ಖಾತೆದಾರರ ಮಾಹಿತಿಗಳನ್ನು ಹ್ಯಾಕರುಗಳು ಕಲೆ ಹಾಕುವಲ್ಲಿ ಯಶಸ್ವಿಯಾಗುತ್ತಿದ್ದಾರೆ ಎಂದು ತಿಳಿಸಿತ್ತು. ಹೀಗಾಗಿ ಸರ್ವರ್ ಡೌನ್ಗೆ ಏನು ಕಾರಣ ಎಂಬ ಪ್ರಶ್ನೆ ಇದೀಗ ಸಾಮಾಜಿಕ ಜಾಲತಾಣ ಬಳಕೆದಾರರಲ್ಲಿದೆ.
Comments are closed.