ಕರಾವಳಿ

ಸಂವಿಧಾನದ ಮೂಲಕ ಕೋಟ್ಯಾಂತರ ಜನರಿಗೆ ನ್ಯಾಯ ಸಿಕ್ಕಿದೆ: ಸರ್ಕಲ್‌ ಇನ್ಸ್‌ಪೆಕ್ಟರ್‌ ಮಂಜಪ್ಪ

Pinterest LinkedIn Tumblr

ಕುಂದಾಪುರ: ದೇಶದ ಅದೇಷ್ಟೋ ಜನ ಅಸ್ಪಶ್ರ್ಯತೆಯನ್ನು ಕಣ್ಣಾರೆ ಕಂಡು ಬೆಳೆದಿದ್ದಾರೆ. ಅದರ ನೋವು ಹಾಗೂ ಸಂಕಷ್ಟವನ್ನು ಅನುಭವಿಸಿದ್ದಾರೆ. ದೇಶದ ನೊಂದ ಈ ವರ್ಗದ ಜನರಿಗೆ ಶಕ್ತಿಯನ್ನು ತುಂಬಿದವರು ಡಾ.ಬಿ.ಆರ್‌.ಅಂಬೇಡ್ಕರ್‌ ಅವರು. ಸಂವಿಧಾನದ ಮೂಲಕ ಕೋಟ್ಯಾಂತರ ಜನರಿಗೆ ನ್ಯಾಯವನ್ನು ನೀಡಿದ ಅವರು ಸರ್ವಕಾಲಕ್ಕೂ ನಿತ್ಯ ಸ್ಮರನೀಯರು ಎಂದು ಕುಂದಾಪುರ ಸರ್ಕಲ್‌ ಇನ್ಸ್‌ಪೆಕ್ಟರ್‌ ಮಂಜಪ್ಪ ಡಿ.ಆರ್‌ ನುಡಿದರು. ಇಲ್ಲಿನ ಶಾಸ್ತ್ರಿ ಸರ್ಕಲ್‌ ಬಳಿಯಲ್ಲಿ ಮಂಗಳವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮ ಘರ್ಜನೆ) ಆಶ್ರಯದಲ್ಲಿ ಪಾರ್ಲಿಮೆಂಟ್‌ಗೆ ಸಂವಿಧಾನ ಅರ್ಪಣೆ ಮಾಡಿದ ದಿನದ ಆಚರಣೆ ಅಂಗವಾಗಿ ನಡೆದ ’ಸಮಬಾಳು ಸಮಪಾಲಿಗೆ ನಮ್ಮ ಹೋರಾಟ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನ್ಯಾಯವಾದಿ ಕೆ.ವಿಕಾಸ್ ಹೆಗ್ಡೆ, ದೇಶದಲ್ಲಿರುವ ಧರ್ಮಗಳಿಗೆ ಅನುಗುಣವಾಗಿ ಬೇರೆ ಬೇರೆ ಧರ್ಮ ಗ್ರಂಥಗಳಿದ್ದರೂ, ದೇಶದ 130 ಕೋಟಿ ಜನರಿಗೂ ಮಾನ್ಯವಾಗಿರುವ ಅರ್ಪಿತವಾಗಿರುವ ಧರ್ಮಗ್ರಂಥ ಎಂದರೆ ಅದು ಡಾ.ಬಿ.ಆರ್‌.ಅಂಬೇಡ್ಕರ್‌ ನೀಡಿದ ಸಂವಿಧಾನ. ಸ್ವಾತಂತ್ರ್ಯ ಹಾಗೂ ಸಂವಿಧಾನ ರಚನೆಯ ಪುಣ್ಯ ಕ್ಷಣಗಳನ್ನು ಇಂದಿನ ಯುವ ಪೀಳಿಗೆ ಕಣ್‌ ತುಂಬಿಸಿಕೊಳ್ಳಲು ಆಗದೆ ಇದ್ದರೂ, ನಮ್ಮ ಹಿರಿಯರು ನೀಡಿರುವ ಸ್ವಾತಂತ್ರ್ಯ ಹಾಗೂ ಸಂವಿಧಾನವನ್ನು ಉಳಿಸಿಕೊಳ್ಳುವ ಮಹತ್ತರವಾದ ಹೊಣೆ ಇದೆ ಎಂದು ಅವರು ನುಡಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮ ಘರ್ಜನೆಯ ರಾಜ್ಯಾಧ್ಯಕ್ಷ ಉದಯ್‌ಕುಮಾರ್ ತಲ್ಲೂರು, ಮಂಜುನಾಥ, ಕೌಸಿಕ್ ಪಾರ್ಕರ್ , ಚಂದ್ರ ಅಲ್ತಾರ್, ವಿಜಯ್ ಕೆ.ಎಸ್ ಇದ್ದರು.

Comments are closed.