ಕರಾವಳಿ

ನಮ್ಮ ಪ್ರತಿ ಕಾರ್ಯವೂ ಭಗವಂತನ ಸೇವೆ ಎಂಬ ಪೂಜ್ಯ ಭಾವನೆ ಅಗತ್ಯ ; ಮಂಗಳಾಮೃತ ಚೈತನ್ಯ

Pinterest LinkedIn Tumblr

ಅಮೃತಾನಂದಮಯಿ ಮಠದಲ್ಲಿ ಅಮೃತ ಸ್ಪರ್ಶ ಕಾರ್ಯಕ್ರಮ

ಮಂಗಳೂರು : ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದಲ್ಲಿ ಅಮೃತ ಸ್ಪರ್ಶ ವಿಶೇಷ ಕಾರ್ಯಕ್ರಮ ಜರುಗಿತು. ಮಠದ ಮುಖ್ಯಸ್ಥರಾದ ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯರು ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.ಡಾ.ರಕ್ಷಿತಾ ನಾಯಕ್ ಮತ್ತು ಸಿ ಎ ರಾಮನಾಥ ನಾಯಕ್ ದಂಪತಿಗಳು ಅಮ್ಮನ ಪಾದುಕಾಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಆಶೀರ್ವಚನವಿತ್ತು ಮಾತನಾಡಿದ ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯ “ಬರುವ ವರ್ಷ 2020 ಅಮ್ಮನವರ ಮಂಗಳೂರಿಗೆ ಅಮ್ಮನವರ ಭಾವಸ್ಪರ್ಶದ ಇಪ್ಪತ್ತೈದನೇ ವರ್ಷ. ಮಂಗಳೂರಿನ ಅಮ್ಮನ ಭಕ್ತರಿಗೆ ಇದು ಅತ್ಯಂತ ಸಂತೋಷದ ಸಂಗತಿ. ಅಮ್ಮ ಸ್ವಚ್ಛತೆ ಗೆ ಹೆಚ್ಚು ಆದ್ಯತೆ ನೀಡುತ್ತಿದ್ದು ಇದು ಯಜ್ಞದ ರೀತಿಯಲ್ಲಿ ಪವಿತ್ರವಾದ ಸೇವೆಯಾಗಬೇಕು.ಅಂತರಂಗ ಬಹಿರಂಗ ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಬೇಕು, ಅಮ್ಮನವರು ಹೇಳುವಂತೆ ನಮ್ಮ ಪ್ರತಿಯೊಂದು ಸೇವೆಗಳು ,ನಮ್ಮ ಕೆಲಸಗಳು ಭಗವಂತನ ಪೂಜೆ ಎಂಬ ಪವಿತ್ರ ಭಾವನೆಯಿಂದ ಮಾಡಬೇಕು. ಜೀವನದಲ್ಲಿ ಬರುವ ಪ್ರತಿಯೊಂದು ವಿಚಾರವನ್ನು ದೇವರ ಪ್ರಸಾದವೆಂದು ಪೂಜ್ಯ ಭಾವನೆಯಿಂದ ಸ್ವೀಕರಿಸಬೇಕು ಎಂದರು.

ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ಮೀನಾಕ್ಷಿ ರಾಮಚಂದ್ರ ಇವರು ನೆರೆದಿದ್ದ ಅಮ್ಮನ ಭಕ್ತರನ್ನುದ್ದೇಶಿಸಿ ಮಾತನಾಡುತ್ತಾ ” ಅಮ್ಮನವರು ಮಂಗಳೂರಿಗೆ ತಮ್ಮ ದಿವ್ಯ ಪಾದಾರ್ಪಣೆಗೈದು ಇಪ್ಪತ್ತೈದು ವರ್ಷಗಳಾಗುತ್ತಿರುವ ಬಗ್ಗೆ ಈ ವರ್ಷವನ್ನು ವಿಶೇಷ ಕಾರ್ಯಕ್ರಮಗಳ ಮೂಲಕ ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುತ್ತದೆ ಎಂದರು.

ಅಮ್ಮನವರಂತಹ ಸದ್ಗುರುಗಳ ಸಂಪರ್ಕ ಜೀವನದಲ್ಲಿ ಸಕಾರಾತ್ಮಕ ಪರಿವರ್ತನೆ ತರಲು ಅತ್ಯವಶ್ಯಕ ಎಂದು ತನ್ನ ಜೀವನದ ಸುಮಧುರ ಅನುಭವವನ್ನು ಹಂಚಿಕೊಂಡರು. ಹೆಚ್ಚಿನ ಸಂಖ್ಯೆಯ ಜನರು ಅಮ್ಮನವರ ಕಾರ್ಯಕ್ರಮಗಳ ಪ್ರಯೋಜನ ಪಡೆಯುವಂತಾ ಗಲು ನಾವೆಲ್ಲರೂ ಶ್ರಮಿಸೋಣ ಎಂದರು.

ಕಾರ್ಯಕ್ರಮದಲ್ಲಿ ಸೇವಾ ಸಮಿತಿಯ ಪದಾಧಿಕಾರಿಗಳು, ಅಮ್ಮನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ದಶಂಬರ್ 8ರಂದು ಅಮ್ಮನವರ ಭೇಟಿ:

ನೂತನ ಸೇವಾ ಸಮಿತಿಯ ಸದಸ್ಯರು ಅಧ್ಯಕ್ಷ ಡಾ.ವಸಂತ ಕುಮಾರ್ ಪೆರ್ಲ ಇವರ ನೇತೃತ್ವದಲ್ಲಿ ದಶಂಬರ್ 8 ರಂದು ಕೇರಳದ ಅಮೃತಪುರಿಗೆ ತೆರಳಿ ಅಮ್ಮನವರ ದರ್ಶನ ಪಡೆದು, ಇಪ್ಪತ್ತೈದನೆಯ ಬೆಳ್ಳಿ ಹಬ್ಬದ ಪ್ರಯುಕ್ತ ಮಂಗಳೂರಿನ ಭಕ್ತರನ್ನು ಆಶೀರ್ವದಿಸಿ ಅನುಗ್ರಹಿಸಬೇಕೆಂಬ ವಿನಂತಿಯೊಂದಿಗೆ ಸಾಂಪ್ರದಾಯಿಕವಾಗಿ ಆಮಂತ್ರಿಸಲಿರುವರು ಎಂದು ಮಠದ ಪ್ರಕಟಣೆ ತಿಳಿಸಿದೆ.

Comments are closed.