ನವದೆಹಲಿ: ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಮತ್ತೊಮ್ಮೆ ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. ನಿಮಗೆ ಎಸ್ಬಿಐನಿಂದ ಯಾವುದೇ ಸಹಾಯ ಬೇಕಾದ ಪಕ್ಷದಲ್ಲಿ ನೀವು ಅಂತರ್ಜಾಲದಲ್ಲಿ ಕಸ್ಟಮರ್ ಕೇರ್ ನಂಬರ್ ಅನ್ನು ಹುಡುಕಿದರೆ ಅದರಿಂದ ನಿಮಗೆ ಸಾಕಷ್ಟು ತೊಂದರೆಯಾಗಬಹುದು ಅಂತ ಹೇಳಿದೆ. ಒಂದು ವೇಳೆ ನಿಮಗೆ ನಕಲಿ ನಂಬರ್ ಸಿಕ್ಕಿ, ನೀವು ಅವರಿಂದ ತೊಂದರೆಗೆ ಈಡಗಬಹುದು ಅಂತ ಬ್ಯಾಂಕ್ ಟ್ವೀಟ್ ಮೂಲಕ ಗ್ರಾಹಕರಿಗೆ ತಿಳಿಸಿದೆ ಎಸ್ಬಿಐನ ಅಧಿಕೃತ ವೆಬ್ಸೈಟ್ನಲ್ಲಿ ಅಥಾವ ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಯಿಂದ ದೂರವಾಣಿ ಸಂಖ್ಯೆ ಸೇರಿದಂತೆ ಯಾವುದೇ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ ಅಂಥ ಹೇಳಿದೆ.
ಏನು ಮಾಡಬಾರದು
ಗ್ರಾಹಕರು ಇಂಟರ್ನೆಟ್ ಮೂಲಕ ಕಂಡುಬರುವ ಬ್ಯಾಂಕ್ / ಶಾಖೆ ಸಂಖ್ಯೆಗಳಿಗೆ ಎಂದಿಗೂ ಕರೆ ಮಾಡಬಾರದು ಎಂದು ಟ್ವೀಟ್ ಮಾಡುವ ಮೂಲಕ ಎಸ್ಬಿಐ ಹೇಳಿದೆ. ನಿಮ್ಮ ವೈಯಕ್ತಿಕ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಅಲ್ಲದೆ, ನಿಮ್ಮ ಬ್ಯಾಂಕ್ ವಿವರಗಳನ್ನು ಬ್ಯಾಂಕ್ ಖಾತೆ ಸಂಖ್ಯೆ, ಕಾರ್ಡ್ ಸಂಖ್ಯೆ, ಸಿವಿವಿ, ಒಟಿಪಿ ಮತ್ತು ಪಿನ್ ಅನ್ನು ಯಾರಿಗೂ ಬಹಿರಂಗಪಡಿಸಬೇಡಿ.
ಏನು ಮಾಡಬೇಕು
>> Https://bank.sbi ನಲ್ಲಿ ಲಭ್ಯವಿರುವ ಗ್ರಾಹಕರ ಸಂಖ್ಯೆಯನ್ನು ಮಾತ್ರ ಸಂಪರ್ಕಿಸಿ ಎಂದು ಬ್ಯಾಂಕ್ ಹೇಳಿದೆ.
ಶಾಖೆಯ ವಿವರಗಳನ್ನು https://bank.sbi/web/home/locator/branch ನಿಂದ ಮಾತ್ರ ಪಡೆಯಿರಿ.
>> ಎಸ್ಬಿಐ ಅನ್ನು ಸಂಪರ್ಕಿಸಲು ಅಧಿಕೃತ ವಿಧಾನಗಳನ್ನು ಮಾತ್ರ ಬಳಸಿ.

Comments are closed.