ನವದೆಹಲಿ : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) 30 ಪ್ರಮುಖ ಉದ್ದೇಶಪೂರ್ವಕ ಸಾಲಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ವರ್ಷ ಮೇ ತಿಂಗಳಲ್ಲಿ ದಿ ವೈರ್ ಸಲ್ಲಿಸಿದ ಆರ್ಟಿಐಗೆ ಪ್ರತಿಕ್ರಿಯೆಯಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಪಟ್ಟಿಯನ್ನು ಬಿಡುಗಡೆ ಮಾಡಿದೆ ಎನ್ನಲಾಗಿದೆ.
ದೇಶದ ಉದ್ದೇಶಪೂರ್ವಕ ಸಾಲಗಾರರ ಪಟ್ಟಿಯನ್ನು ಸಾರ್ವಜನಿಕವಾಗಿ ಪ್ರಕಟಿಸುವಂತೆ ಸುಪ್ರೀಂ ಕೋರ್ಟ್ ಮೊದಲು ಕೇಂದ್ರ ಬ್ಯಾಂಕಿಗೆ ನಿರ್ದೇಶನ ನೀಡಿದ ನಾಲ್ಕು ವರ್ಷಗಳ ನಂತರ ಪಟ್ಟಿ ಹೊರಬಿದಿದ್ದೆ. ಬಿಡುಗಡೆಯಾಗಿರುವ ಉದ್ದೇಶಪೂರ್ವಕ ಸಾಲಗಾರರ ಪಟ್ಟಿಯಲ್ಲಿ ಪರಾರಿಯಾದ ಉದ್ಯಮಿ ಮೆಹುಲ್ ಚೋಕ್ಸಿಗೆ ಸೇರಿವೆ.
ಪಟ್ಟಿಯಲ್ಲಿರುವ ಹೆಸರುಗಳಲ್ಲಿ ಗೀತಾಂಜಲಿ ಜೆಮ್ಸ್, ರೊಟೊಮ್ಯಾಕ್ ಗ್ಲೋಬಲ್, ಜೂಮ್ ಡೆವಲಪರ್ಸ್, ಡೆಕ್ಕನ್ ಕ್ರಾನಿಕಲ್ ಹೋಲ್ಡಿಂಗ್ಸ್, ವಿನ್ಸಮ್ ಡೈಮಂಡ್ಸ್, ಆರ್ಇಐ ಆಗ್ರೋ, ಸಿದ್ಧಿ ವಿನಾಯಕ ಲಾಜಿಸ್ಟಿಕ್ಸ್ ಮತ್ತು ಕುಡೋಸ್ ಕೆಮಿ ಮುಂತಾದ ಕೆಲವು ಪ್ರಸಿದ್ಧ ಹೆಸರುಗಳಿವೆ. ಆರ್ಬಿಐ ನೀಡಿದ ಪಟ್ಟಿಯನ್ನು CRILCನಿಂದ ಪಡೆದುಕೊಳ್ಳಲಾಗಿದೆ ಎನ್ನಲಾಗಿದೆ.

Comments are closed.