ಕರ್ನಾಟಕ

ಗುದದ್ವಾರದಲ್ಲಿ 21 ಸೆಂ.ಮೀ. ಪೊರಕೆಯ ಹಿಡಿ ಹೊರತೆಗೆಯಲು ವೈದ್ಯರು ಹರಸಾಹಸ.

Pinterest LinkedIn Tumblr

ರಾಮನಗರ: ವ್ಯಕ್ತಿಯೊಬ್ಬರ ಗುದದ್ವಾರದ ಮೂಲಕ ಒಳ ಹೋಗಿದ್ದ ಪೊರಕೆಯ ಹಿಡಿಯನ್ನು ತೆಗೆಯುವಲ್ಲಿ ಇಲ್ಲಿನ ನಾರಾಯಣ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ.

ಮೆಹಬೂಬ್ ನಗರದ ನಿವಾಸಿಯೊಬ್ಬರು ಮೂರು ದಿನದ ಹಿಂದೆ ಗುದದ್ವಾರದ ಮೂಲಕ 21 ಸೆಂ.ಮೀ. ಪೊರಕೆಯ ಹಿಡಿ ಹೊಕ್ಕಿದ್ದು, ಕರುಳಿನವರೆಗೂ ತಲುಪಿತ್ತು. ಇದರಿಂದ ಕರುಳಿನ ಭಾಗಕ್ಕೆ ತುಂಬಾ ತೊಂದರೆಯಾಗುತ್ತಿತ್ತು.

ಭಾನುವಾರ ಶಸ್ತ್ರಚಿಕಿತ್ಸೆ ನಡೆಸಿದ ಡಾ.ಎಸ್.ವಿ. ನಾರಾಯಣಸ್ವಾಮಿ ಅವರು ಪೊರಕೆಯ ಹಿಡಿಯನ್ನು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ. ಅರವಳಿಕೆ ತಜ್ಞ ಡಾ. ಸಂಪಂಗಿ ರಾಮಯ್ಯ, ಶುಶ್ರೂಷಕರಾದ ಸಂಧ್ಯಾ, ದಿಲೀಪ್, ನಾರಾಯಣ ಆಸ್ಪತ್ರೆಯ ಮುಖ್ಯಸ್ಥ ಡಾ.ಎಸ್.ಎನ್. ಮದುಸೂದನ್ ಇದ್ದರು.

Comments are closed.