ಉಡುಪಿ: ಕರ್ತವ್ಯ ಲೋಪದ ಆರೋಪದಲ್ಲಿ ಇತ್ತೀಚೆಗೆ ಉಡುಪಿ ನಗರ ಠಾಣೆ ಉಪನಿರೀಕ್ಷಕ ಅನಂತ ಪದ್ಮನಾಭ ಅವರನ್ನು ಉಡುಪಿ ಎಸ್ಪಿ ನಿಶಾ ಜೇಮ್ಸ್ ಅಮಾನತು ಮಾಡಿದ್ದು ಈ ಅಮಾನತು ರದ್ಧುಗೊಳಿಸಿ ಅನಂತ ಪದ್ಮನಾಭ ಅವರನ್ನು ಡಿಸಿಐಬಿಗೆ ವರ್ಗ ಮಾಡಲಾಗಿದೆ.

ಉಡುಪಿ ಭುಜಂಗ ಪಾರ್ಕಿನಲ್ಲಿ ಗೆಳತಿಯೊಂದಿಗೆ ಮಾತನಾಡುತ್ತಿದ್ದ ಯುವಕರ ಮೇಲೆ ಇನ್ನೊಂದು ಗುಂಪು ಹಲ್ಲೆ ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಕರ್ತವ್ಯ ಲೋಪ ಎಸಗಿದ್ದಾರೆಂದು ಪಿಎಸ್ಐ ಅವರನ್ನು ಅಮನಾತು ಮಾಡಲಾಗಿತ್ತು.
ಎಸ್ಸೈ ಅನಂತಪದ್ಮನಾಭ ಅವರನ್ನು ಅಮಾನತುಗೊಳಿಸಿದ್ದಕ್ಕೆ ಉಡುಪಿ ಶಾಸಕ ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸೇರಿದಂತೆ ವಿವಿಧ ಸಂಘಟನೆಗಳು, ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಎಸ್ಪಿ ಮಂಗಳೂರು ಪಶ್ಚಿಮ ವಲಯ ಐಜಿಪಿಯವರಿಗೆ ಕಳುಹಿಸಿಕೊಟ್ಟಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಿದ ಐಜಿಪಿ ಎಸ್ಸೈ ಅವರ ಅಮಾನತು ಆದೇಶವನ್ನು ರದ್ದುಗೊಳಿಸಿ ವರ್ಗಾವಣೆ ಮಾಡಿದ್ದಾರೆ.
Comments are closed.