ಮುಂಬೈ: ಹಿರಿಯ ಬಾಲಿವುಡ್ ನಟಿ ಡಿಂಪಲ್ ಕಪಾಡಿಯಾ ಅವರ ತಾಯಿ ಬೆಟ್ಟಿ ಕಪಾಡಿಯಾ ಅವರನ್ನು ಉಪನಗರ ಖಾರ್‌ನ ಹಿಂದೂಜಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ಶನಿವಾರ ತಿಳಿಸಿವೆ.
‘ಅವರನ್ನು ನವೆಂಬರ್ 14 ರಂದು ಆಸ್ಪತ್ರೆಗೆ ದಾಖಲಿಸಲಾಯಿತು.ಅವರು ಐಸಿಯುನಲ್ಲಿದ್ದಾರೆ’ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಈ ಹಿಂದಿನ ದಿನ, ಡಿಂಪಲ್ ಅವರ ಮಗಳು ಟ್ವಿಂಕಲ್ ಮತ್ತು ಅಳಿಯ ಅಕ್ಷಯ್ ಕುಮಾರ್ ಆಸ್ಪತ್ರೆಯಲ್ಲಿ ಕಾಣಿಸಿಕೊಂಡ ನಂತರ ಡಿಂಪಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು.
ಈಗ ಡಿಂಪಲ್ ಕಪಾಡಿಯಾ ಚಲನಚಿತ್ರ ನಿರ್ಮಾಪಕ ಕ್ರಿಸ್ಟೋಫರ್ ನೋಲನ್ ಅವರ “ಟೆನೆಟ್” ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Comments are closed.