ಮುಂಬೈ

ತಾಯಿ,ಅಜ್ಜಿಯೊಂದಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ನಾಲ್ಕು ತಿಂಗಳ ಮಗು ಮೃತ್ಯು, ಕಾರಣ ನಿಗೂಢ..?

Pinterest LinkedIn Tumblr

ಮುಂಬೈ: ಸೂರತ್‍ನಿಂದ ಮುಂಬೈಗೆ ತೆರಳುತ್ತಿದ್ದ ಸ್ಪೈಸ್ ಜೆಟ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ನಾಲ್ಕು ತಿಂಗಳ ಹೆಣ್ಣು ಮಗು ಶುಕ್ರವಾರ ಮೃತಪಟ್ಟಿದ್ದಾಳೆ. ಮಗುವಿನ ಸಾವಿಗೆ ಕಾರಣವೇನೆಂದು ಮರಣೋತ್ತರ ಪರೀಕ್ಷೆಯಿಂದಲೂ ದೃಢಪಟ್ಟಿಲ್ಲ. ಮಗುವಿನ ದೇಹದ ಅಂಗಾಂಶಗಳ ಮಾದರಿಯ ಪರೀಕ್ಷೆಗೆ ಸರ್ ಜೆ ಜೆ ಆಸ್ಪತ್ರೆಗೆ ಕಳುಹಿಸಲಾಗಿದೆ.

ಮಗು ರಿಯಾ ತನ್ನ ತಾಯಿ ಪ್ರೀತಿ ಜಿಂದಾಲ್ ಹಾಗೂ ಅಜ್ಜ, ಅಜ್ಜಿಯೊಂದಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಕುಟುಂಬ ಸದಸ್ಯರ ಅರಿವಿಗೆ ಬಾರದೇ ಪ್ರಜ್ಞೆ ತಪ್ಪಿರಬಹುದೆಂದು ತಿಳಿಯಲಾಗಿದೆ.

ವಿಮಾನ ಮುಂಬೈ ತಲುಪಿದಂತೆಯೇ ವಿಮಾನ ನಿಲ್ದಾಣದ ವೈದ್ಯಕೀಯ ಕೊಠಡಿಗೆ ಕರೆದುಕೊಂಡು ಹೋಗಲಾಯಿತು. ಮಗುವನ್ನು ಅಲ್ಲಿಂದ ನಾನಾವತಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಅದಾಗಲೇ ಆಕೆ ಮೃತಪಟ್ಟಿದ್ದಾಳೆಂದು ವೈದ್ಯರು ಘೋಷಿಸಿದರು.

ಮಗುವಿಗೆ ಸುಮಾರು 5.30ರ ಸುಮಾರಿಗೆ ಹಾಲು ನೀಡಿದ ನಂತರ ಮಗು ನಿದ್ದೆ ಮಾಡಿದ್ದಳೆನ್ನಲಾಗಿದ್ದು ಮಗು ಯವುದೇ ಚಲನೆ ತೋರದೇ ಇದ್ದರೂ ನಿದ್ದೆಗೆ ಜಾರಿರಬಹುದೆಂದು ಸಿಬ್ಬಂದಿಗೆ ತಿಳಿಸಲಾಗಿರಲಿಲ್ಲ. ಆದರೆ ವಿಮಾನ ಇಳಿಯುವ ಹಂತದಲ್ಲೂ ಮಗುವಿನಲ್ಲಿ ಯಾವುದೇ ಚಲನೆ ಕಂಡು ಬರದ ಹಿನ್ನೆಲೆಯಲ್ಲಿ ಸಿಬ್ಬಂದಿಗೆ ತಿಳಿಸಲಾಯಿತು.

ಆಕಸ್ಮಿಕ ಸಾವು ಪ್ರಕರಣ ದಾಖಲಿಸಲಾಗಿದೆ.

Comments are closed.