ಮುಂಬೈ

‘ಕೇವಲ ರಾಮಮಂದಿರ ನಿರ್ಮಾಣ ಹಿಂದುತ್ವವಲ್ಲ’- ಶಿವಸೇನೆ

Pinterest LinkedIn Tumblr


ಮುಂಬೈ: ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿದ ಬೆನ್ನಲ್ಲೇ ಶಿವಸೇನೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿವಸೇನೆ ವರಿಷ್ಠ ಉದ್ಧವ್ ಠಾಕ್ರೆ ಬಿಜೆಪಿಯದ್ದು ನಕಲಿ ಹಿಂದುತ್ವ ಎಂದು ಕಿಡಿಕಾರಿದ್ದಾರೆ.

ಕೇವಲ ರಾಮಮಂದಿರ ನಿರ್ಮಾಣ ಮಾಡುವುದು ಹಿಂದುತ್ವವಲ್ಲ. ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಕೂಡಾ ಹಿಂದುತ್ವದ ಭಾಗ ಎಂದಿರುವ ಅವರು ಕಾಶ್ಮೀರದಲ್ಲಿ ಪಿಡಿಪಿಯ ಮೆಹಬೂಬ ಮುಫ್ತಿ ಜೊತೆ ಸೇರಿ ಬಿಜೆಪಿ ಸರಕಾರ ನಡೆಸುವುದಾದರೆ ಮಹಾರಾಷ್ಟ್ರದಲ್ಲಿ ಭಿನ್ನವಿಚಾರಧಾರೆಗೆ ಸೇರಿರುವ ಕಾಂಗ್ರೆಸ್, ಎನ್‌ಸಿಪಿ ಹಾಗೂ ಶಿವಸೇನೆ ಯಾಕೆ ಸರಕಾರ ರಚಿಸಬಾರದು ಎಂದು ಪ್ರಶ್ನಿಸಿದರು.

ಶಿವಸೇನೆ ಹಾಗೂ ಬಿಜೆಪಿ ನಡುವೆ ನಿಗದಿಯಾಗಿದ್ದ ಚುನಾವಣಾಪೂರ್ವ ಮೈತ್ರಿ ಮುರಿಯಲು ಬಿಜೆಪಿ ಕಾರಣ ಎಂದು ಆರೋಪಿಸಿದ ಉದ್ಧವ್ ಠಾಕ್ರೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಎನ್‌ಸಿಪಿ ಜೊತೆಗೂಡಿ ಸರಕಾರ ನಡೆಸಲು ನಮಗೆ ಆತುರವಿಲ್ಲ. ಭಿನ್ನವಿಚಾರಧಾರೆಯ ಪಕ್ಷಗಳು ಜೊತೆ ಸೇರುವಾಗ ಕೆಲವೊಂದು ಮಾತುಕತೆ ನಡೆಯಬೇಕಾಗಿದೆ. ಇದು ಅಷ್ಟೊಂದು ಸಲುಭದ ಮಾತಲ್ಲ.ಅದಕ್ಕಾಗಿ ಹೆಚ್ಚಿನ ಕಾಲಾವಕಾಶ ಬೇಕಾಗುತ್ತದೆ ಎಂದರು.

ಸರಕಾರ ರಚನೆಯ ಕುರಿತಾಗಿ ಮಾತುಕತೆಗಳು ಮುಂದುವರಿದಿದೆ. ಎರಡೂ ಪಕ್ಷಗಳ ನಡುವೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಕುರಿತಾಗಿ ಚರ್ಚೆ ನಡೆಯುತ್ತಿದೆ. ಈ ನಡುವೆ ರಾಷ್ಟ್ರಪತಿ ಆಳ್ವಿಕೆ ಪ್ರಶ್ನಿಸಿ ಶಿವಸೇನೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು ಕಾಂಗ್ರೆಸ್ ಹಾಗೂ ಎನ್‌ಸಿಪಿ ನಡುವೆ ಮಾತುಕತೆ ಮುಂದುವರಿದಿದೆ.

Comments are closed.