ಕರಾವಳಿ

ಮನಪಾ ಚುನಾವಣೆ : ಶಾಂತಿಯುತ ಮತದಾನ – ಒಟ್ಟು 235628 (59.67 ಶೇ). ಮಂದಿಯಿಂದ ಮತದಾನ – ಮಹಿಳೆಯರೇ ಅಧಿಕ

Pinterest LinkedIn Tumblr

ಮಂಗಳೂರು, ನವೆಂಬರ್.12 : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 60 ವಾರ್ಡ್‌ಗಳಿಗೆ ಇಂದು ನಡೆದ ಚುನಾವಣೆಯು ಬೆಳಗ್ಗೆ 7ಗಂಟೆಯಿಂದ ಆರಂಭವಾದ ಮತದಾನ ಪ್ರಕ್ರಿಯೆ ಸಂಜೆ 5 ಗಂಟೆಗೆ ಮುಕ್ತಯವಾಗಿದೆ. 60 ವಾರ್ಡ್‌ಗಳಲ್ಲಿ ಒಟ್ಟು 59.67 ಶೇ. ಮತದಾನವಾಗಿದೆ.

39 ನೇ ವಾರ್ಡ್ ವಾರ್ಡ್‌ನಲ್ಲಿ ಕಾರ್ಯಕರ್ತರ ನಡುವೆ ನಡೆದ ಮಾತಿನ ಚಕಮಕಿ ಬಿಟ್ಟರೆ ಉಳಿದ ಎಲ್ಲಾ ಕಡೆಗಳಲ್ಲಿ ಮತದಾನ ಶಾಂತಿಯುತವಾಗಿ ನಡೆದಿದೆ.

ಬೆಳಗ್ಗಿನಿಂದ ಮತದಾನ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿದ್ದು, ಮಧ್ಯಾಹ್ನ 1 ಗಂಟೆ ಸುಮಾರಿಗೆ 39.50 ಶೇ. ಮತದಾನವಾಗಿದೆ. ಬಳಿಕ ಮಧ್ಯಾಹ್ನ 3 ಗಂಟೆ ಸುಮಾರಿಗೆ 46.81 ಶೇ. ಮತದಾನವಾಗಿದೆ. ಈ ವೇಳೆ 91517 ಮಂದಿ ಪುರುಷರು ಹಾಗೂ 94610 ಮಂದಿ ಮಹಿಳೆಯರು ಮತ ಚಲಾಯಿಸಿದ್ದರು.

ಸಂಜೆ 5ಗಂಟೆಗೆ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು,60 ವಾರ್ಡ್‌ಗಳಲ್ಲಿ ಒಟ್ಟು 59.67 ಶೇ. ಮತದಾನವಾಗಿದೆ. ಇದರಲ್ಲಿ 113084 ಮಂದಿ ಪುರುಷರು ಹಾಗೂ 122527 ಮಂದಿ ಮಹಿಳೆಯರು ಹಾಗೂ ಇತರರು 17 ಮಂದಿ ಮತ ಚಲಾಯಿಸಿದ್ದಾರೆ.

Comments are closed.