
ಮುಂಬೈ:ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹಚರ ಇಕ್ಬಾಲ್ ಮಿರ್ಚಿ ಜತೆಗೆ ವಹಿವಾಟು ಆರೋಪ ಸಂಬಂಧ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಬುಧವಾರ ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಆರ್‌ಕೆಡಬ್ಲ್ಯು ಡೆವಲಪರ್ಸ್ ನಿರ್ದೇಶಕ ರಂಜೀತ್ ಸಿಂಗ್ ಬಿಂದ್ರಾ ಅವರು ನನಗೆ ಗೊತ್ತು. ಅವರೊಂದಿಗೆ ನಾನು ವೃತ್ತಿಪರ ಸಂಬಂಧ ಹೊಂದಿದ್ದೆ. ಆದರೆ, ಆತನಿಗೆ ದಾವೂದ್ ಇಬ್ರಾಹಿಂ ಜತೆ ನಂಟಿತ್ತು ಎಂಬ ವಿಚಾರ ನನಗೆ ಗೊತ್ತಿರಲಿಲ್ಲ ಎಂದು ರಾಜ್ ಕುಂದ್ರಾ ಇ.ಡಿ. ಅಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ, ಬಿಂದ್ರಾ ಜತೆಗಿನ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ರಾಜ್ ಇ.ಡಿಗೆ ಸಲ್ಲಿಸಿದ್ದಾರೆ ಎನ್ನಲಾಗಿದೆ.
Comments are closed.