ಅಂತರಾಷ್ಟ್ರೀಯ

ದುಬಾರಿ ಕಾರಿನ ಡೋರ್ ತೆರೆಯಲಾಗದೇ ಬೆಂಕಿಯಲ್ಲಿ ಸುಟ್ಟು ಸಾವನ್ನಪ್ಪಿದ ಚಾಲಕ..!

Pinterest LinkedIn Tumblr


ತಂತ್ರಜ್ಞಾನ ಮುಂದುವರೆದು ಜನರಿಗೆ ಸಹಕಾರಿಯಾಗೋ ಬದಲು ಜನರ ಜೀವವನ್ನೇ ಕಸಿದುಕೊಳ್ಳುವ ಯಂತ್ರಗಳಾಗಿ ಮಾರ್ಪಡಾಗುತ್ತಿವೆ. ಯಾಕಂದ್ರೆ ಸಾವು ಯಾವ ಸಮಯದಲ್ಲಿ ಯಾವ ರೀತಿ ಬರುತ್ತೆ ಅನ್ನೋದು ಗೊತ್ತೇ ಆಗಲ್ಲ. ಇಲ್ಲೊಂದು ಘಟನೆಯಲ್ಲಿ ಕಾರು ಚಾಲಕನೊಬ್ಬ ಅತ್ಯಾಧುನಿಕ ಕಾರಿನೊಳಗೆ ಸಿಲುಕಿ ಅದ್ರಿಂದ ಹೊರಬರಲಾಗದೆ ಬೆಂಕಿಯಲ್ಲಿ ಸುಟ್ಟು ಸಾವನ್ನಪ್ಪಿದ್ದಾನೆ.

ಈ ಘಟನೆ ನಡೆದಿರೋದು ಸೌತ್​ ಫ್ಲೋರಿಡಾದಲ್ಲಿ. ಅಮೆರಿಕಾ ಮೂಲದ ಕಾರು ತಯಾರಿಕಾ ಕಂಪನಿ ಟೆಸ್ಲಾ ಎಸ್​ ಮಾಡೆಲ್​​ ಕಾರು ಅತ್ಯಾಧುನಿಕ ತಂತ್ರಜ್ಞಾನಗಳನ್ನ ಹೊಂದಿದೆ. ಇದ್ರಲ್ಲಿ ಆಟೋ ಪೈಲಟ್​ ಸೇರಿದಂತೆ ಹತ್ತು ಹಲವು ವಿಶಿಷ್ಟ ತಂತ್ರಜ್ಞಾನಗಳಿವೆ. ಆದ್ರೆ ಈ ತಂತ್ರಜ್ಞಾನವೇ ಚಾಲಕನ ಸಾವಿಗೆ ಕಾರಣವಾಗಿದೆ.

48 ವರ್ಷದ ಒಮರ್ ಅವಾನ್​ ಗಂಟೆಗೆ 120 ರಿಂದ 145 ಪ್ರತಿ ಕಿ.ಮೀ​ ವೇಗದಲ್ಲಿ ಕಾರು ಚಲಾಯಿಸುತ್ತಿದ್ದ ವೇಳೆ ಆಯತಪ್ಪಿ ತಾಳೆ ಮರಕ್ಕೆ ಡಿಕ್ಕಿ ಹೊಡೆದಿದ್ದಾನೆ. ಇದ್ರಿಂದ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಒಳಗೆ ದಟ್ಟವಾದ ಹೊಗೆ ತುಂಬಿಕೊಂಡಿದೆ. ಆದ್ರೆ ಆಟೋ ಲಾಕ್​ ಆಗಿದ್ದ ಕಾರ್​ ಡೋರ್​ ಹ್ಯಾಂಡಲ್​ಗಳೇ ಇಲ್ಲದ ಕಾರಣ, ಅತ್ಯಾಧುನಿಕ ಡೋರ್ ತೆರೆಯಲಾಗದೇ ಕಾರಿನೊಳಗೆ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ.

ಈ ಹಿನ್ನೆಲೆ ಒಮರ್ ಕುಟುಂಬಸ್ಥರು ಅಸಹಜ ಸಾವಿನ ಕುರಿತು ದೂರು ದಾಖಲಿಸಿದ್ದು, ಕಾರಿನ ಬಾಗಿಲಿಗೆ ಹೊರಗಿನಿಂದ ಹ್ಯಾಂಡಲ್​ ಇಲ್ಲದೆ ಇರುವುದು ಹಾಗೂ ಪೊಲೀಸರು ಆ ಜಾಗಕ್ಕೆ ಬಂದಾಗ ಡೋರ್ ತೆರೆಯಲಾಗದೇ ಇದ್ದಿದ್ದರಿಂದ ಒಮರ್ ಸಾವನ್ನಪ್ಪಿದಾಗಿ ತಿಳಿಸಿದ್ದಾರೆ.

ಇದರ ನಡುವೆ ಟೆಸ್ಲಾ ಕಾರ್ ಕಂಪನಿ ಈ ದುರ್ಘಟನೆಯಿಂದ ನಮಗೂ ನೋವಾಗಿದೆ. ಅಲ್ಲದೆ ಅಪಘಾತಕ್ಕೆ ಅತಿಯಾದ ವೇಗ ಕಾರಣವಾ ಅನ್ನೋ ಬಗ್ಗೆ ತನಿಖೆ ಮಾಡಲಾಗುತ್ತದೆ. ಎಲೆಕ್ಟ್ರಿಕ್ ಕಾರುಗಳು ಮಾತ್ರವಲ್ಲದೆ, ಎಲ್ಲಾ ರೀತಿಯ ಕಾರುಗಳು ಅಪಘಾತವಾದಾಗ ಬೆಂಕಿ ಕಾಣಿಸಿಕೊಳ್ಳುತ್ತದೆ ಅಂತ ಒಮರ್ ಕುಟುಂಬಸ್ಥರು ತನ್ನ ವಿರುದ್ಧ ಮಾಡಿರುವ ಆರೋಪವನ್ನ ತಳ್ಳಿ ಹಾಕಿದೆ.

ಇನ್ನು ಟೆಸ್ಲಾದ ಈ ಮಾಡೆಲ್​ನ ಕಾರಿನಲ್ಲಿ ಉಂಟಾದ ಅಪಘಾತ ಇದೇ ಮೊದಲೇನಲ್ಲ. ಹಲವು ಘಟನೆಗಳಲ್ಲಿ ಈ ಕಾರಿನ ಡಿಸೈನ್​​​ನಲ್ಲಿನ ದೋಷಗಳು ಕಾರಣವಾಗಿವೆ. ಟೆಸ್ಲಾದ ಮಾಡೆಲ್​ 3 ಸೆಡಾನ್​ ಕಾರು ಆಟೋ ಪೈಲಟ್ ಮೋಡ್​​ನಲ್ಲಿ ಚಾಲಕನ ಕೈಯನ್ನ ಸ್ಟೀರಿಂಗ್​ನಲ್ಲಿ ಗುರುತಿಸಲಾಗದೇ 50 ವರ್ಷದ ಚಾಲಕ ಜರಮಿ ಬ್ಯಾನರ್ ಅಪಘಾತದಲ್ಲಿ ಸಾವನ್ನಪ್ಪಿದ್ದ. ಬಳಿಕ 2016ರಲ್ಲಿ ಜೂಹೂ ಬ್ರೌನ್​​ ಎಂಬ ಚಾಲಕ ಟೆಸ್ಲಾ ಎಸ್​ ಮಾಡೆಲ್​ ಕಾರನ್ನ ಚಾಲಾಯಿಸುತ್ತಿದ್ದ ವೇಳೆ ಸೆಮಿ ಟ್ರಕ್​​ಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದ.

Comments are closed.