ರಾಷ್ಟ್ರೀಯ

ಇಂಡೋ-ಪಾಕ್ ಗಡಿಯಲ್ಲಿ ಸೇನೆಯ ಜೊತೆ ಪ್ರಧಾನಿ ಮೋದಿಯಿಂದ ದೀಪಾವಳಿ ಆಚರಣೆ

Pinterest LinkedIn Tumblr


ನವದೆಹಲಿ:ಜಮ್ಮು-ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ(ಎಲ್ ಒಸಿ)ಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಯೋಧರ ಜತೆ ದೀಪಾವಳಿ ಸಂಭ್ರವನ್ನು ಆಚರಿಸಿದ್ದು ಈ ಬಾರಿಯ ವಿಶೇಷತೆಯಾಗಿದೆ. ಗಡಿ ರೇಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧರಿಗೆ ಸಿಹಿ ಹಂಚುವ ಮೂಲಕ ಪ್ರಧಾನಿ ಮೋದಿ ದೀಪಾವಳಿ ಆಚರಿಸಿದರು.

ದೇಶಾದ್ಯಂತ ಎಲ್ಲರೂ ಹಬ್ಬವನ್ನೂ ಆಚರಿಸುತ್ತಿರುವ ನಡುವೆಯೂ ದೇಶದ ಗಡಿಭಾಗದಲ್ಲಿ ಬಿಗಿ ಭದ್ರತೆಯಲ್ಲಿ ತೊಡಗಿರುವ ಯೋಧರ ಕಾರ್ಯದಕ್ಷತೆಯನ್ನು ಪ್ರಧಾನಿ ಮೋದಿ ಶ್ಲಾಘಿಸಿದರು.

ದೀಪಾವಳಿ ಸಂದರ್ಭದಲ್ಲಿ ಜನರು ತಮ್ಮ ಕುಟುಂಬದ ಜತೆ ಬೆಳಕಿನ ಹಬ್ಬವನ್ನು ಆಚರಿಸುವುದು ಸಂಪ್ರದಾಯವಾಗಿದೆ. ಈ ಹಿನ್ನೆಲೆಯಲ್ಲಿ ನಾನೂ ಕೂಡಾ ನನ್ನ ಕುಟುಂಬ(ಯೋಧರ) ಜತೆ ದೀಪಾವಳಿ ಆಚರಿಸಲು ನಿರ್ಧರಿಸಿರುವುದಾಗಿ ಈ ಸಂದರ್ಭದಲ್ಲಿ ಹೇಳೀದರು.

ಹೀಗಾಗಿ ದೀಪಾವಳಿ ಹಬ್ಬವನ್ನು ನಿಮ್ಮ ಜತೆ ಆಚರಿಸುವ ನಿಟ್ಟಿನಲ್ಲಿ ಇಲ್ಲಿಗೆ ಆಗಮಿಸಿದ್ದೇನೆ. ನೀವು ನಮ್ಮ ಕುಟುಂಬ ಎಂದು ನೆರೆದಿದ್ದ ದೇಶದ ಯೋಧರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.

ಎಲ್ಲಾ ಜನಸಾಮಾನ್ಯರು ತಮ್ಮ ಕುಟುಂಬವೇ ಮೊದಲು ಎಂದು ಆಲೋಚಿಸುತ್ತಾರೆ. ಆದರೆ ದೇಶದ ಸೈನಿಕರಿಗೆ ಭಾರತವೇ ತಾಯಿ ಎಂದು ಭಾವಿಸುತ್ತಾರೆ. ಅಲ್ಲದೇ ದೇಶದ 130 ಕೋಟಿ ಜನರಿಗೆ ರಕ್ಷಣೆಯನ್ನು ನೀಡುತ್ತಿದ್ದಾರೆ. ನಮ್ಮ ದೇಶ ಮತ್ತು ನಮ್ಮ ಕರ್ತವ್ಯ ಮೊದಲು ಎಂಬುದು ನಿಮ್ಮ ಆದ್ಯತೆಯಾಗಿದೆ. ಮಿಕ್ಕಿದ್ದೆಲ್ಲವೂ ನಂತರ ಸ್ಥಾನ ಪಡೆಯಲಿದೆ. ಆದರೆ ಈ ಹಬ್ಬದ ಸಂದರ್ಭದಲ್ಲಿ ಕುಟುಂಬದ ಸದಸ್ಯರು ದೀಪಾವಳಿಯನ್ನು ಒಟ್ಟಿಗೆ ಆಚರಿಸಬೇಕೆಂದು ಬಯಸುತ್ತಾರೆ. ಆದರೆ ನೀವು ಗಡಿಯಲ್ಲಿ ರಕ್ಷಣೆಯಲ್ಲಿ ತೊಡಗಿರುತ್ತೀರಿ ಎಂದು ಈ ಸಂದರ್ಭದಲ್ಲಿ ಹೇಳಿದರು.

Comments are closed.