ಉಡುಪಿ: ಉಡುಪಿ ಜಿಲ್ಲೆಯ ಕಾಪುವಿನ ಇನ್ನಂಜೆ ಗ್ರಾಮದಲ್ಲಿ ಕಳೆದ ಐದು ದಿನಗಳ ಹಿಂದೆ ನಡೆದಿದ್ದ ವೃದ್ಧೆಯೊಬ್ಬರ ಚಿನ್ನದ ಸರಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಕಾಪು ಪೊಲೀಸರು ಬಂಧಿಸಿದ್ದಾರೆ. ಮೂಲತಃ ರಾಯಚೂರಿನ ಸದ್ಯ ಕಾಪು ನಿವಾಸಿ ಕೃಷ್ಣ ನರಸಿಂಹ ಶಾಸ್ತ್ರೀ (27) ಮತ್ತು ಮೂಲತಃ ಬಾಗಲಕೋಟೆಯವನಾದ ಸದ್ಯ ಬೆಂಗಳೂರು ಕೆ.ಹೆಚ್.ಬಿ. ಕಾಲನಿ, ಹೌಸಿಂಗ್ ಬೋರ್ಡ್ ನಿವಾಸಿ ವಿಜಯ್ ಕುಮಾರ್ (21) ಬಂಧಿತ ಆರೋಪಿಗಳು.

ಅ.8 ರಂದು ಇನ್ನಂಜೆ ಗ್ರಾಮದ ಮೂಡುಮನೆ ಗೋಳಿಕಟ್ಟೆಯ ಶಾಂತಾ ಆಚಾರ್ಯ(68) ಎನ್ನುವರು ದನಗಳಿಗೆ ಹುಲ್ಲು ತರಲು ಹೋಗುತ್ತಿದ್ದ ಸಮಯದಲ್ಲಿ ಇಬ್ಬರು ಆರೋಪಿಗಳು ಬೈಕ್ ನಲ್ಲಿ ಬಂದು ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಸುಲಿಗೆ ಮಾಡಿ ಹೋಗಿದ್ದರು. ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ಕೈಗೊಂಡ ಕಾಪು ಸಿಪಿಐ ಮಹೇಶ್ ಪ್ರಸಾದ್ ಹಾಗೂ ತಂಡ ತನಿಖೆ ಕೈಗೊಂಡಿದ್ದು ಆರೋಪಿಗಳನ್ನು ಕಟಪಾಡಿಯಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಕದ್ದಿದ್ದ 50 ಸಾವಿರ ಮೌಲ್ಯದ ಚಿನ್ನದ ಸರ, 30 ಸಾವಿರ ಮೌಲ್ಯದ ಹೊಂಡಾ ಶೈನ್ ಬೈಕ್, ಹತ್ತು ಸಾವಿರ ನಗದು ಹಾಗೂ ಮೊಬೈಲ್ ಫೋನುಗಳನ್ನು ವಶಪಡಿಸಲಾಗಿದೆ. ವಶಪಡಿಸಿಕೊಂಡ ಎಲ್ಲಾ ಸೊತ್ತುಗಳ ಒಟ್ಟು ಮೌಲ್ಯ 93 ಸಾವಿರ ಆಗಿದೆ.
ಕಾರ್ಯಾಚರಣೆ ತಂಡ…
ಉಡುಪಿ ಎಸ್ಪಿ ನಿಶಾ ಜೇಮ್ಸ್, ಹೆಚ್ಚುವರಿ ಎಸ್ಪಿ ಕುಮಾರಚಂದ್ರ ನಿರ್ದೇಶನಲ್ಲಿ ಕಾರ್ಕಳ ಉಪವಿಭಾಗದ ಎಎಸ್ಪಿ ಕೆ. ಕೃಷ್ಣಕಾಂತ್ ಮಾರ್ಗದರ್ಶನದಲ್ಲಿ ಕಾಪು ಸರ್ಕಲ್ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್, ಕಾಪು ಠಾಣಾ ಪಿ.ಎಸ್.ಐ. ರಾಜಶೇಖರ ಬಿ. ಸಾಗನೂರು ,ಪ್ರೊಬೇಷನರಿ ಪಿಎಸ್‌ಐ ಯವರಾದ ಉದಯರವಿ, ಸದಾಶಿವ ಗವರೋಜಿ, ಮಹದೇವ ಬೋಸ್ಲೆ ಹಾಗೂ ಸಿಬ್ಬಂದಿಯವರಾದ ಪ್ರವೀಣ್ ಕುಮಾರ್, ರಾಜೇಶ್, ಸಂದೇಶ್, ಸುಕುಮಾರ್, ಜಗದೀಶ್, ರವಿಕುಮಾರ್, ಮಹಾಬಲ,ಸುಧಾಕರ ಬಿಜೂರು,ಸಂದೀಪ ಶೆಟ್ಟಿ, ರಾಘವೇಂದ್ರ ಜೋಗಿ, ಆನಂದ ಹಾಗೂ ಇತರರು ಈ ಕಾರ್ಯಾಚರಣೆಯಲ್ಲಿದ್ದರು.
Comments are closed.