ಮನೋರಂಜನೆ

ಬಹುವೆಚ್ಚದ ಕೆಜಿಎಫ್ 2 ಚಿತ್ರೀಕರಣಕ್ಕೆ ಮತ್ತೂಂದು ಅಡ್ಡಿ

Pinterest LinkedIn Tumblr


ಕೆಜಿಎಫ್: ಬಹುವೆಚ್ಚದ ಕೆಜಿಎಫ್ 2 ಚಿತ್ರೀಕರಣಕ್ಕೆ ಮತ್ತೂಂದು ಅಡ್ಡಿ ಎದುರಾಗುವ ಸಂಭವ ಇದೆ. ಕುಖ್ಯಾತ ರೌಡಿ ತಂಗಂ ನ ತಾಯಿ ಪೌಳಿ ಕೆಜಿಎಫ್ 2 ಚಿತ್ರೀಕರಣಕ್ಕೆ ತಡೆಯಾಜ್ಞೆ ನೀಡಬೇಕೆಂದು ಇಲ್ಲಿನ ಜೆಎಂಎಫ್ಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಆದರೆ ತಡೆಯಾಜ್ಞೆ ನೀಡದ ನ್ಯಾಯಾಲಯ ವಿಜಯ ಕಿರದಂಗೂರು, ಪ್ರಶಾಂತ್‌, ಫಿಲ್ಮ್ ಚೇಂಬರ್‌ ಮತ್ತು ಬಿಜಿಎಂಎಲ್‌ ಸಿಎಸ್‌ಒ ಅವರಿಗೆ ಸಮನ್ಸ್‌ ಜಾರಿ ಮಾಡಿದೆ. ಕೆಜಿಎಫ್ ಚಿತ್ರವು ತನ್ನ ಮಗ ತಂಗಂ ಜೀವನಕ್ರಮವನ್ನು ಹೋಲುತ್ತಿದೆ. ಕೆಜಿಎಫ್ ಚಿತ್ರದಲ್ಲಿ ಅವನನ್ನು ಕೆಟ್ಟದಾಗಿ ತೋರಿಸಲಾಗಿದೆ. ಆದ್ದರಿಂದ ತಡೆಯಾಜ್ಞೆ ನೀಡಬೇಕೆಂದು ಪೌಳಿ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ಅ. 9ಕ್ಕೆ ನಡೆಯಲಿದೆ ಎಂದು ವಕೀಲ ಮಣಿವಣ್ಣನ್‌ ತಿಳಿಸಿದ್ದಾರೆ.

ಈ ಹಿಂದೆ ‘ಕೆಜಿಎಫ್​ 2’ ಚಿತ್ರತಂಡ ಕೋಲಾರದ ಕೆನಡೀಸ್​ ಸೈನೈಡ್​ ಗುಡ್ಡದಲ್ಲಿ ಚಿತ್ರೀಕರಣ ನಡೆಸದಂತೆ ಜೆಎಂಎಫ್​ಸಿ ನ್ಯಾಯಾಲಯ ತಡೆ ನೀಡಿತ್ತು. ಆದರೆ ಈ ಆದೇಶವನ್ನು ಕರ್ನಾಟಕ ಹೈಕೋರ್ಟ್ ಏಕ ಸದಸ್ಯ ಪೀಠ ರದ್ದುಗೊಳಿಸಿತು.

Comments are closed.