
ನವದೆಹಲಿ: ಪಾಕಿಸ್ತಾನದಲ್ಲಿ ಮಂಗಳವಾರ ಸಂಭವಿಸಿದ ಪ್ರಬಲ ಭೂಕಂಪಕ್ಕೆ 19 ಮಂದಿ ಬಲಿಯಾಗಿದ್ದಾರೆ. ಅಲ್ಲದೇ, ಮುನ್ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಸಾವು-ನೋವಿನ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ. ರಿಕ್ಟರ್ ಮಾಪನದಲ್ಲಿ 5.8ರ ತೀವ್ರತೆ ದಾಖಲಾಗಿದೆ.
ಭಾರತ-ಪಾಕ್ ಗಡಿಯಲ್ಲೂ ಭೂಕಂಪನವಾಗಿದೆ. ರಾಜಧಾನಿ ದೆಹಲಿಯ ಎನ್ಸಿಆರ್ ವಲಯದಲ್ಲಿ ಸಂಜೆ 4.30ರ ಸಮಯದಲ್ಲಿ ಭೂಕಂಪನವಾಗಿದೆ. ಭೂ ಕಂಪನದ ಅನುಭವ ಪಡೆದ ಮನೆಯೊಳಗಿದ್ದ ಜನರು ಭಯಗೊಂಡು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.
ಪಂಜಾಬ್ನ ಚಂಡೀಗಢದಲ್ಲೂ ಶೇ.6.1 ತೀವ್ರತೆಯ ಭೂಕಂಪನವಾಗಿದೆ. ಉತ್ತರಾಖಂಡದ ಡೆಹಾರಡೂನ್ನಲ್ಲೂ ಭೂಮಿ ನಡುಗಿದೆ. ಭೂಕಂಪನವು ಪಾಕಿಸ್ತಾನದಲ್ಲಿರುವ ರಾವಲ್ಪಿಂಡಿಯಿಂದ 92 ಕಿ.ಮೀ. ದೂರದಲ್ಲಿ ಕೇಂದ್ರಬಿಂದುವಾಗಿದೆ ಎಂದು ವರದಿಗಳು ಹೇಳಿವೆ. ಸುಮಾರು ಹತ್ತು ಸೆಕೆಂಡ್ಗಳ ಕಾಲ ಇಸ್ಲಾಮಾಬಾದ್, ಪೇಶಾವರ, ರಾವಲ್ಪಿಂಡಿ ಮತ್ತು ಲಾಹೋರ್ ಒಳಗೊಂಡಂತೆ ಉತ್ತರ ಪಾಕಿಸ್ತಾನದ ಹಲವು ನಗರಗಳಲ್ಲಿ ಭೂಮಿ ನಡುಗಿದೆ ಎಂದು ಡಾನ್ ನ್ಯೂಸ್ ಟಿವಿ ವರದಿ ಮಾಡಿದೆ.
ಯುಎಸ್ ಜಿಯಾಗ್ರಾಪಿಕಲ್ ಸರ್ವೆಯೂ ಭೂಕಂಪನದ ಕೇಂದ್ರಬಿಂದು ಸ್ಥಾನದಲ್ಲಿ 5.8ರ ತೀವ್ರತೆಯ ಭೂಕಂಪನವಾಗಿದೆ ಎಂದು ಹೇಳಿದೆ.
Comments are closed.