ರಾಷ್ಟ್ರೀಯ

ಪಾಕ್ ನಲ್ಲಿ ಪ್ರಬಲ ಭೂಕಂಪಕ್ಕೆ 19 ಮಂದಿ ಸಾವು

Pinterest LinkedIn Tumblr


ನವದೆಹಲಿ: ಪಾಕಿಸ್ತಾನದಲ್ಲಿ ಮಂಗಳವಾರ ಸಂಭವಿಸಿದ ಪ್ರಬಲ ಭೂಕಂಪಕ್ಕೆ 19 ಮಂದಿ ಬಲಿಯಾಗಿದ್ದಾರೆ. ಅಲ್ಲದೇ, ಮುನ್ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಸಾವು-ನೋವಿನ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ. ರಿಕ್ಟರ್​ ಮಾಪನದಲ್ಲಿ 5.8ರ ತೀವ್ರತೆ ದಾಖಲಾಗಿದೆ.

ಭಾರತ-ಪಾಕ್​ ಗಡಿಯಲ್ಲೂ ಭೂಕಂಪನವಾಗಿದೆ. ರಾಜಧಾನಿ ದೆಹಲಿಯ ಎನ್​ಸಿಆರ್​ ವಲಯದಲ್ಲಿ ಸಂಜೆ 4.30ರ ಸಮಯದಲ್ಲಿ ಭೂಕಂಪನವಾಗಿದೆ. ಭೂ ಕಂಪನದ ಅನುಭವ ಪಡೆದ ಮನೆಯೊಳಗಿದ್ದ ಜನರು ಭಯಗೊಂಡು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.

ಪಂಜಾಬ್​ನ ಚಂಡೀಗಢದಲ್ಲೂ ಶೇ.6.1 ತೀವ್ರತೆಯ ಭೂಕಂಪನವಾಗಿದೆ. ಉತ್ತರಾಖಂಡದ ಡೆಹಾರಡೂನ್​ನಲ್ಲೂ ಭೂಮಿ ನಡುಗಿದೆ. ಭೂಕಂಪನವು ಪಾಕಿಸ್ತಾನದಲ್ಲಿರುವ ರಾವಲ್ಪಿಂಡಿಯಿಂದ 92 ಕಿ.ಮೀ. ದೂರದಲ್ಲಿ ಕೇಂದ್ರಬಿಂದುವಾಗಿದೆ ಎಂದು ವರದಿಗಳು ಹೇಳಿವೆ. ಸುಮಾರು ಹತ್ತು ಸೆಕೆಂಡ್​ಗಳ ಕಾಲ ಇಸ್ಲಾಮಾಬಾದ್​, ಪೇಶಾವರ, ರಾವಲ್ಪಿಂಡಿ ಮತ್ತು ಲಾಹೋರ್ ಒಳಗೊಂಡಂತೆ ಉತ್ತರ ಪಾಕಿಸ್ತಾನದ ಹಲವು ನಗರಗಳಲ್ಲಿ ಭೂಮಿ ನಡುಗಿದೆ ಎಂದು ಡಾನ್​ ನ್ಯೂಸ್​ ಟಿವಿ ವರದಿ ಮಾಡಿದೆ.

ಯುಎಸ್​ ಜಿಯಾಗ್ರಾಪಿಕಲ್ ಸರ್ವೆಯೂ ಭೂಕಂಪನದ ಕೇಂದ್ರಬಿಂದು ಸ್ಥಾನದಲ್ಲಿ 5.8ರ ತೀವ್ರತೆಯ ಭೂಕಂಪನವಾಗಿದೆ ಎಂದು ಹೇಳಿದೆ.

Comments are closed.