ರಾಷ್ಟ್ರೀಯ

ಏಕ ರೂಪದ ಕಾರ್ಡ್ ಹೊರತರುವ ಬಗ್ಗೆ ಶಾ ಚಿಂತನೆ

Pinterest LinkedIn Tumblr


ಹೊಸದಿಲ್ಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಏಕ ರೂಪದ ಕಾರ್ಡ್ ಹೊರತರುವ ಬಗ್ಗೆ ಮಾತನಾಡಿದ್ದಾರೆ. ದಿಲ್ಲಿಯಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿವರು, ಎಲ್ಲಾ ಬಳಕೆಗೆ ಅನುವಾಗುವಂತಹ ಒಂದೇ ಕಾರ್ಡ್ ಬಳಸುವಂತಾಗಬೇಕು. ಈಗಿರುವ ಪಾಸ್ ಪೋರ್ಟ್ , ಆಧಾರ್, ಡ್ರೈವಿಂಗ್ ಲೈಸೆನ್ಸ್ ಮತ್ತು ಬ್ಯಾಂಕ್ ಖಾತೆ, ಮತದಾರರ ಗುರುತಿನ ಚೀಟಿ ಎಲ್ಲವನ್ನೂ ಒಂದೇ ಕಾಡ್ ರೂಪದಲ್ಲಿ ಬಳಸುವ ಪದ್ದತಿಯನ್ನು ಪರಿಚಯಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ಇದಕ್ಕೆ ಡಿಜಿಟಲ್ ಸ್ಪರ್ಶ ದೊರಕಿದರೆ ಎಲ್ಲವೂ ಸುಲಭವಾಗಲಿದೆ. ನಮ್ಮ ಎಲ್ಲ ಮಾಹಿತಿಗಳು ಇಂದೇ ರೂಪದಲ್ಲಿ ಒಂದೇ ಕಡೆ ಲಭ್ಯವಾದರೆ ಬಹುತೇಕ ಯೋಜನೆಗಳು ಸುಲಭವಾಗಿ ಜನರ ಕೈಗೆ ಸಿಗಲಿದೆ. ಇಲ್ಲಿ ಎಲ್ಲಾ ದಾಖಲೆಗಳನ್ನು ಪ್ರಸ್ತುತ ಪಡಿಸುವ ಬದಲು ಒಂದೇ ದಾಖಲೆಯನ್ನು ನೀಡಿದರೆ ಸುಲಭವಾಗುತ್ತದೆ. ಅದರಲ್ಲಿ ಪಾಸ್ ಪೋರ್ಟ್ ಮಾಹಿತಿಯೂ ಸಿಗಲಿದ್ದು, ಅವನು ಜಗತ್ತಿನ ಯಾವ ಮೂಲೆಗೂ ಹೋಗಬಹುದು ಎಂದಿದ್ದಾರೆ.

ಡಿಜಿಟಲ್ ಸೆನ್ಸಸ್
ಮುಂಬರುವ 2021ರ ಜನ ಗಣತಿಯನ್ನು ಮೊಬೈಲ್ ಆ್ಯಪ್ ಮೂಲಕ ನಡೆಸಲಾಗುವುದು. ಈ ಮೂಲಕ ಇವರೆಗೆ ನಡೆದುಕೊಂಡು ಬಂದ ಕ್ರಮದಲ್ಲಿ ದೊಡ್ಡ ಕ್ರಾಂತಿ ಮಾಡಲಾಗುವುದು ಎಂದಿದ್ದಾರೆ. ಈ ವ್ಯವಸ್ಥೆ ಕಾರ್ಯ ರೂಪಕ್ಕೆ ಬಂದರೆ ಒಂದು ವೇಳೆ ವ್ಯಕ್ತಿ ನಿಧನ ಹೊಂದಿದರೆ ಎಲ್ಲ ಮಾಹಿತಿಗಳು ಸ್ವಯಂ ಚಾಲಿತವಾಗಿ ದಾಖಲಾಗುವಂತೆ ಮಾಡುವ ಉದ್ದೇಶ ಇದೆ ಎಂದಿದ್ದಾರೆ.

Comments are closed.