
ಪೋರ್ಟ್ ಬ್ಲೇರ್: ಮಯಾನ್ಮಾರ್ ದೇಶದಿಂದ ಹಡಗಿನ ಮೂಲಕ ಕಳ್ಳಸಾಗಣೆಯಿಂದ ತರಲಾಗುತ್ತಿದ್ದ 1,160 ಕೆಜಿಯಷ್ಟು ನಿಷೇಧಿತ ಡ್ರಗ್ಸ್ ನ್ನು ಭಾರತೀಯ ಕರಾವಳಿ ಪಡೆ ನಿಕೋಬಾರ್ ದ್ವೀಪದಲ್ಲಿ ವಶಪಡಿಸಿಕೊಂಡಿದೆ. ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರು ಜನರನ್ನು ವಶಕ್ಕೆ ಪಡೆಯಲಾಗಿದೆ.
ವಶಪಡಿಸಿಕೊಂಡಿರುವ ಡ್ರಗ್ಸ್ ನ ಮೌಲ್ಯ 300 ಕೋಟಿ ರೂ.ಗೂ ಅಧಿಕ ಎಂದು ಅಂದಾಜಿಸಲಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಹಡಗಿನಲ್ಲಿ ಬಂದಿದ್ದ ಸರಕು ಹಿಂದೂ ಮಹಾ ಸಾಗರದಲ್ಲಿ ಕಾರ್ಯ ನಿರ್ವಹಿಸುವ ಬೃಹತ್ ಡಗ್ಸ್ ಜಾಲಕ್ಕೆ ಸೇರಿದ್ದಾಗಿದೆ ಅಧಿಕಾರಿಗಳು ಎಂದು ಅಂದಾಜಿಸಲಾಗಿದೆ.
Comments are closed.