
ಸ್ಯಾಂಡಲ್ ವುಡ್ ಚಿತ್ರಗಳಿಗೆ ಸಾಮಾನ್ಯವಾಗಿ ಪರಭಾಷಾ ನಟಿಯರನ್ನು ಕರೆತರುವುದನ್ನು ನೋಡಿದ್ದೇವೆ. ಆದರೀಗ ಸ್ಯಾಂಡಲ್ ವುಡ್ ನಟಿಯರಾದ ರಶ್ಮಿಕ ಮಂದಣ್ಣ, ಶ್ರದ್ಧಾ ಶ್ರೀನಾಥ್, ಸಂಯುಕ್ತ ಹೆಗಡೆ ಸೇರಿದಂತೆ ಹಲವು ನಟಿಯರು ಪರಭಾಷಾ ನಟಿಯರಿಗೆ ತಾವೇನು ಕಡಿಮೆ ಇಲ್ಲ ಎಂಬುವಂತೆ ಪರಭಾಷಾ ಚಿತ್ರಗಳಲ್ಲಿ ಮಿಂಚುತ್ತಿದ್ದಾರೆ. ಇನ್ನೂ ಈ ಸಾಲಿಗೆ ನಟಿ ನಭಾ ನಟೇಶ್ ಕೂಡ ಸೇರ್ಪಡೆಯಾಗಿದ್ದಾರೆ. ಸದ್ಯ ಇತ್ತೀಚೆಗಿನ ಕೆಲವು ಫೋಟೋಶೂಟ್ ಗಳಲ್ಲಿ ಶೈನ್ ಆಗಿ ಕಾಣಿಸಿಕೊಳ್ಳುವ ಮೂಲಕ ಟಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದ್ದಾರೆ.
ಸ್ಯಾಂಡಲ್ ವುಡ್ ನ ವಜ್ರಕಾಯ ಚಿತ್ರದ ಮೂಲಕ ಸಿನಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ನಟಿ ನಭಾ ನಟೇಶ್. ಕನ್ನಡದ ಯಾವುದೇ ಸಿನಿಮಾಗಳಲ್ಲಿಯೂ ಅಷ್ಟಾಗಿ ನಟಿಸಲಿಲ್ಲವಾದರೂ ಟಾಲಿವುಡ್ ನಲ್ಲಿ ಧೂಳ್ ಎಬ್ಬಿಸುತ್ತಿದ್ದಾರೆ.
ಹೌದು ಟಾಲಿವುಡ್ ನ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಆ್ಯಕ್ಷನ್ ಕಟ್ ಹೇಳಿದ್ದ ಇಸ್ಮಾರ್ಟ್ ಶಂಕರ್ ಚಿತ್ರದಲ್ಲಿ ತೆಲಂಗಾಲ ಹುಡುಗಿ ಪಾತ್ರದ ಮಿಂಚುವ ಮೂಲಕ ರಾಮ್ ಪೋತಿನೇನಿಗೆ ಜೋಡಿಯಾಗಿ ಟಾಲಿವುಡ್ನಲ್ಲಿ ಹೊಸ ಅಲೆ ಸೃಷ್ಟಿಸಿರುವ ನಭಾ ನಟೇಶ್ ಈಗ ಫೋಟೋಶೂಟ್ಗಳಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಇವರ ಇತ್ತೀಚಿನ ಫೋಟೋಶೂಟ್ನ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನಭಾ ನಟೇಶ್ ಗ್ಲಾಮರ್ ಹಾಗೂ ಹಾಟ್ ಲುಕ್ ಗೆ ಪ್ರೇಕ್ಷಕ ಮಾರುಹೋಗಿದ್ದಾನೆ.
Comments are closed.