ರಾಷ್ಟ್ರೀಯ

ಬಿಜೆಪಿ ನಾಯಕ ಸ್ವಾಮಿ ಚಿನ್ಮಯಾನಂದ ವಿರುದ್ಧ 43 ದೃಶ್ಯದ ತುಣುಕುಗಳನ್ನು ನೀಡಿದ ಸಂತ್ರಸ್ಥೆಯ ತಂದೆ

Pinterest LinkedIn Tumblr


ಲಕ್ನೋ: ಬಿಜೆಪಿ ನಾಯಕ ಸ್ವಾಮಿ ಚಿನ್ಮಯಾನಂದ ಒಂದು ವರ್ಷದಿಂದ ನಿರಂತರವಾಗಿ ಅತ್ಯಾಚಾರ ಮತ್ತು ದೈಹಿಕ ದೌರ್ಜನ್ಯ ಎಸಗಿದ್ದಾರೆ ಎಂದು ಉತ್ತರಪ್ರದೇಶದ ಶಹಜಹಾನಪುರದ ಕಾನೂನು ವಿದ್ಯಾರ್ಥಿನಿ ಶನಿವಾರ ಮತ್ತೊಂದು ಅಚ್ಚರಿಕೆ ವಿಷಯವನ್ನು ಬಯರಂಗಗೊಳಿಸಿದ್ದಾರೆ.

ಮಾಜಿ ಸಂಸದ ಚಿನ್ಮಯಾನಂದ ನಾನು ಸ್ನಾನ ಮಾಡುವುದನ್ನು ಸನ್ನಿವೇಶವನ್ನು ವಿಡಿಯೋ ಮಾಡಿಕೊಂಡು ಬ್ಲಾಕ್​ಮೇಲ್​ ಮಾಡಿ ಅತ್ಯಾಚಾರ ಎಸಗಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ.

ಅತ್ಯಾಚಾರ ಪ್ರಕರಣದ ತನಿಖೆಗೆ ನೇಮಿಸಲಾಗಿರುವ ವಿಶೇಷ ತನಿಖಾ ತಂಡಕ್ಕೆ ಇಂದು ಸಂತ್ರಸ್ತ ಯುವತಿಯ ತಂದೆ 43 ದೃಶ್ಯಾವಳಿ ತುಣುಕುಗಳನ್ನು ಒಪ್ಪಿಸಿದ್ದಾರೆ. ಸಾಕ್ಷ್ಯಗಳ ನಾಶಪಡಿಸಿದ್ದರ ಜೊತೆಗೆ 376ನೇ ವಿಧಿ ಪ್ರಕಾರ ಕ್ರಮ ತೆಗೆದುಕೊಳ್ಳುವಂತೆ ಯುವತಿ ತಂದೆ ಆಗ್ರಹಿಸಿದ್ದಾರೆ. ಚಿನ್ಮಯಾನಂದ ಒಡೆತನ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿದ್ದ ಯುವತಿ ಅವರೇ ಹಾಸ್ಟೆಲ್​ನಲ್ಲಿ ಇದ್ದರು. ಈ ವೇಳೆ ಮಗಳ ಹಾಸ್ಟೆಲ್​ ಕೋಣೆಯಲ್ಲಿದ್ದ ಸಾಕ್ಷ್ಯಗಳನ್ನು ನಾಶಪಡಿಸಲಾಗಿದೆ ಎಂದು ಸ್ವಾಮಿ ಚಿನ್ಮಯಾನಂದ ವಿರುದ್ಧ ಆರೋಪಿಸಲಾಗಿದೆ.

ಮಗಳು ಸ್ನಾನ ಮಾಡುವ ದೃಶ್ಯವನ್ನು ಸೆರೆಹಿಡಿದು ಚಿನ್ಮಯಾನಂದ ಬ್ಲಾಕ್​ ಮೇಲ್​ ಮಾಡಿ, ಅತ್ಯಾಚಾರ ಎಸಗಿದ್ದಾನೆ. ಆ ಬಳಿಕ ಚಿನ್ಮಯಾನಂದ ಮಾಡುವ ಎಲ್ಲ ಕೃತ್ಯಗಳನ್ನು ಮಗಳು ಸಿಸಿ ಕ್ಯಾಮರಾದಲ್ಲಿ ಸೆರೆಹಿಡಿಯಲು ನಿರ್ಧರಿಸಿದ್ದಳು ಎಂದು ಸಂತ್ರಸ್ತ ಯುವತಿ ತಂದೆ ಮಾಧ್ಯಮದ ಮುಂದೆ ಹೇಳಿದರು.

ಸಂತ್ರಸ್ತ ಯುವತಿಯ ಸ್ನೇಹಿತೆ ಮಾತನಾಡಿ, ನಾನು ಮತ್ತು ಆಕೆ ಇಬ್ಬರು ಒಂದೇ ಕಾಲೇಜಿನಲ್ಲಿ ಜೊತೆಯಲ್ಲಿ ಓದುತ್ತಿದ್ದೆವು. ಒಮ್ಮೆ ಅವಳು ತಾನು ಎದುರಿಸುತ್ತಿರುವ ಸಮಸ್ಯೆಯನ್ನು ನನ್ನ ಬಳಿ ಹೇಳಿಕೊಂಡಳು. ಅವಳಿಗೆ ಮೊದಲು ಉಚಿತವಾಗಿ ಊಟ, ಹಾಗೂ ಹಾಸ್ಟೆಲ್​ನಲ್ಲಿ ಎಲ್ಲ ರೀತಿಯ ಸೌಲಭ್ಯವನ್ನು ನೀಡಲಾಗಿತ್ತು. ಆದರೆ, ಅದನ್ನು ಅವಳಿಗೆ ಏಕೆ ನೀಡಲಾಗುತ್ತಿದೆ ಎಂಬುದು ತಿಳಿದಿರಲಿಲ್ಲ. ಆನಂತರ ಅವಳು ಹೇಳಿದಳು, ಅವರ ಸ್ನಾನಕ್ಕೆ ಹೋದಾಗ ಆ ದೃಶ್ಯ ಸೆರೆಯಾಗಿದೆ. ಅದೇ ವಿಡಿಯೋ ಇಟ್ಟುಕೊಂಡು ಬ್ಲಾಕ್​ಮೇಲ್​ ಮಾಡುತ್ತಿದ್ದರು ಎಂದು ತಿಳಿಸಿದರು.

Comments are closed.