ಕರ್ನಾಟಕ

ಮಗಳ ಹೇಳಿಕೆ ಮೇಲೆ ಡಿಕೆಶಿ ಭವಿಷ್ಯ!

Pinterest LinkedIn Tumblr


ಬೆಂಗಳೂರು: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರ ಮಗಳು ಐಶ್ವರ್ಯ ಅವರಿಗೆ ಜಾರಿ ನಿರ್ದೇಶನಾಲಯವು ಸಮನ್ಸ್ ನೀಡಿರುವ ಹಿನ್ನೆಲೆ ಇಂದು ಬೆಳಗ್ಗೆ 11 ಗಂಟೆಗೆ ದೆಹಲಿಯಲ್ಲಿರುವ ಇಡಿ ಕಚೇರಿಗೆ ಐಶ್ವರ್ಯ ಅವರು ವಿಚಾರಣೆಗೆ ಹಾಜರಾಗಲಿದ್ದಾರೆ.

ಈ ವೇಳೆ ಡಿ.ಕೆ ಶಿವಕುಮಾರ್ ಅವರು ಮತ್ತು ಪುತ್ರಿ ಐಶ್ವರ್ಯ ಅವರಿಬ್ಬರು ‌ಮುಖಾಮುಖಿ‌ಯಾಗಲಿದ್ದು, ಮಗಳ ಹೇಳಿಕೆ ಮೇಲೆ ಡಿಕೆ ಶಿವಕುಮಾರ್ ಭವಿಷ್ಯ! ನಿಂತಿದೆ ಎನ್ನಲಾಗುತ್ತಿದೆ. ಇನ್ನು ಈಗಾಗಲೇ ಐಶ್ವರ್ಯ ಶಿವಕುಮಾರ್ ಅವರು ದೇಶದಲ್ಲಿ ರಾಜಧಾನಿಯಲ್ಲಿ ಇದ್ದಾರೆ. ವಿಚಾರಣೆ ವೇಳೆ ಇಡಿ ಅಧಿಕಾರಿಗಳು 108 ಕೋಟಿ ಇನ್ವೆಸ್ಟ್ಮೆಂಟ್ಗೆ ಲೆಕ್ಕಚಾರ ಕೇಳಲಾಗುವುದು.

23 ವರ್ಷದ ಮಗಳಿಗೆ 108 ಕೋಟಿ ಮೌಲ್ಯದ ಆಸ್ತಿ ಬಂದಿದ್ದೆಲ್ಲಿಂದೆ(?) ಅಷ್ಟೆಲ್ಲಾ ಸಂಪಾದನೆ ಮಾಡೋ ವಯಸ್ಸಾ ಐಶ್ವರ್ಯ ಶಿವಕುಮಾರ್ಳದ್ದು(?) ಇದಕ್ಕೆ ಪ್ರತ್ಯುತ್ತರವಾಗಿ ಅಪ್ಪನೇ ನನ್ನ ಹೆಸರಲ್ಲಿ ಹೂಡಿಕೆ ಮಾಡಿದ್ದಾರೆ ಅಂದರೆ ಡಿಕೆಶಿ ಕತೆ ಕಲ್ಲಾಸ್(?!) ಹೀಗಾಗಿ ಮಗಳು ಐಶ್ವರ್ಯ ಉತ್ತರವೇ ತಂದೆಗೆ ಶ್ರೀರಕ್ಷೆ ಆಗಲಿದೆ.

ಅಲ್ಲದೇ ಡಿಕೆಶಿ ಅವರ ಇನ್ನಿಬ್ಬರು ಮಕ್ಕಳಾದ ಆಭರಣ -ಆಕಾಶ್ ಹೆಸರಲ್ಲಿಲ್ಲ ಹೆಚ್ಚಿನ ಆಸ್ತಿಗಳು, ಐಶ್ವರ್ಯ ಹೆಸರಲ್ಲೇ ಗ್ಲೋಬಲ್ ಎಂಜಿನಿಯರಿಂಗ್ ಕಾಲೇಜ್​ನಲ್ಲಿ ಹೂಡಿಕೆ ಮಾಡಲಾಗಿದ್ದು ಐಶ್ವರ್ಯ ಹೆಸರಲ್ಲೇ ಕಾಫಿ ಡೇ ಸಿದ್ಧಾರ್ಥ್ ಹೆಗ್ಡೆಗೆ ಕೋಟಿ ಕೋಟಿ ಸಾಲ ನೀಡಲಾಗಿದೆ. ನ್ಯಾಷನಲ್ ಹಿಲ್ ವ್ಯೂ ಶಾಲೆಯಲ್ಲೂ ಐಶ್ವರ್ಯ ಹೆಸರಲ್ಲಿ ಹೂಡಿಕೆಯಾಗಿದೆ. ವ್ಯವಸಾಯದ ಜಮೀನು ಸಹ ಅಜ್ಜಿಯಿಂದ ಮೊಮ್ಮಗಳ ಹೆಸರಿಗೆ ಗಿಫ್ಟ್ ಡೀಡ್(?) ಇದೆಲ್ಲವೂ 2018ರ ಎಂಎಲ್ಎ ಎಲೆಕ್ಷನ್ ಅಫಿಡವಿಟ್ನಲ್ಲಿ ನಮೂದು ಆಗಿದೆ.

ಅಂತೆಯೇ ಅಕ್ರಮವಾಗಿ ಹಣ ವರ್ಗಾವಣೆ ಆರೋಪದಲ್ಲಿ ವಿಚಾರಣೆ ಕೂಡ ನಡೆಸುವ ಸಾಧ್ಯತೆಯಿದ್ದು ಸೋಲ್ ಮತ್ತು ಸೇಲ್ ಕಂಪನಿಯಲ್ಲಿ 78 ಕೋಟಿ ಹೂಡಿಕೆ ಮಾಡಲಾಗಿದೆ, ಸಿದ್ದಾರ್ಥ ಸೇರಿದ‌ ಕಾಫಿ ಡೇ ಮೂಲಕ 20 ಕೋಟಿ ಹಣ ವರ್ಗಾವಣೆ ಆಗಿದೆ. ಈ ಕುರಿತು ಪುತ್ರಿ ಐಶ್ವರ್ಯ ಶಿವಕುಮಾರ್ ಅವರು ಆದಾಯ ಮೂಲದ ಬಗ್ಗೆ ವಿವರಣೆ ನೀಡಿಬೇಕಿದೆ. 2003ರಲ್ಲಿ ಅವರು ಕೇವಲ 1 ಕೋಟಿ ಆದಾಯ ಹೊಂದಿದ್ದರು. 2018ರ ಸಾಲಿನಲ್ಲಿ 108 ಕೋಟಿ ಆದಾಯ ಘೋಷಣೆ ಮಾಡಲಾಗಿದ್ದು ಇಷ್ಟು ಆದಾಯ ಹೆಚ್ಚಾಗಲು ಇಡಿ ಕಾರಣ ಕೇಳಲಿದೆ.

Comments are closed.