ಕರಾವಳಿ

ಆಪರೇಶನ್ ಕಮಲಕ್ಕೆ ಸಾವಿರಾರು ಕೋಟಿ ವ್ಯಯಿಸುವ ಬಿಜೆಪಿ ಪ್ರವಾಹ ಪೀಡಿತರಿಗೆ ಪರಿಹಾರ ನೀಡಿಲ್ಲ: ಕಾಂಗ್ರೆಸ್

Pinterest LinkedIn Tumblr

ಉಡುಪಿ: ರಾಜ್ಯದ 22 ಜಿಲ್ಲೆಗಳು ಪ್ರವಾಹದಿಂದ ಅಕ್ಷರಶಃ ಮುಳುಗಿ ಹೋಗಿ ತಿಂಗಳಾಗಿದೆ. ಅಲ್ಲಿನ ಲಕ್ಷಾಂತರ ಜನಸಾಮಾನ್ಯರು ನಿರಾಶ್ರಿತರಾಗಿದ್ದಾರೆ. ಸಾವಿರಾರು ಮನೆಗಳು, ಕೊಟ್ಟಿಗೆಗಳು ನೆಲಸಮ ಆಗಿವೆ. ಮನೆಗಳನ್ನು ಕಳೆದುಕೊಂಡವರು ಡೇರೆಗಳಲ್ಲಿ ವಾಸಿಸುತ್ತಿದ್ದಾರೆ. ಹತ್ತಾರು ಜನ ಪ್ರಾಣ ಕಳಕೊಂಡಿದ್ದಾರೆ. ಆದರೆ ಆಪರೇಶನ್ ಕಮಲಕ್ಕೆ ಸಾವಿರ ಕೋಟಿ ಖರ್ಚು ಮಾಡುವ ಬಿಜೆಪಿ ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಅವರದ್ದೆ ಸರ್ಕಾರ ಆಡಳಿತ ನಡೆಸುತ್ತಿದ್ದರೂ ಈ ತನಕ ಬಿಡಿಗಾಸು ಪರಿಹಾರವನ್ನು ಬಿಡುಗಡೆ ಮಾಡಿಲ್ಲ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.

ಕರ್ನಾಟಕ ರಾಜ್ಯ ಸರ್ಕಾರ ಹಾಗೂ ಕೇಂದ್ರದ ಮೋದಿ ಸರ್ಕಾರಗಳ ಸರ್ವಾಧಿಕಾರಿ ಜನ ವಿರೋದಿ ನೀತಿಯನ್ನು ವಿರೋದಿಸಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಿ ಕುಂದಾಪುರ ತಹಶಿಲ್ದಾರವರ ಮೂಲಕ ಸರ್ಕಾರಕ್ಕೆ ಈಗೀಂದಗಲೇ ಪರಿಹಾರ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮನವಿ ನೀಡಲಾಯಿತು.

ಚಂದ್ರಯಾನ ವಿಕ್ಷಣೆಗೆ ರಾಜ್ಯಕ್ಕೆ ಬಂದಿದ್ದ ಪ್ರದಾನಿ ಮೋದಿ ನೆರೆಪೀಡಿತ ಪ್ರದೇಶದ ವೀಕ್ಷಣೆ ಮಾಡಿಲ್ಲ. ರಾಜ್ಯದಲ್ಲಿ ಅವರದ್ದೆ ಪಕ್ಷದ ಮುಖ್ಯಮಂತ್ರಿ ಇದ್ದರೂ ನೆರೆಪೀಡಿತ ಜನರ ಸಂಕಷ್ಟಗಳ ಕುರಿತು ಚರ್ಚಿಸಲು ಸಮಯ ನೀಡದೆ ದೆಹಲಿಗೆ ವಾಪಾಸಾಗಿದ್ದಾರೆ. ನೆರೆಪೀಡಿತ ಪ್ರದೇಶದಲ್ಲಿ ಮಾನವೀಯ ನೆಲೆಯಲ್ಲಿ ಆಹಾರ ಸಾಮಾಗ್ರಿಗಳ ವಿತರಣೆ ಕೂಡಾ ನಡೆಯುತ್ತಿಲ್ಲ. ಪ್ರವಾಹದಿಂದ ಜೀವ ಉಳಿಸಿಕೊಳ್ಳಲು ಉಟ್ಟ ಬಟ್ಟೆಯಲ್ಲಿ ಓಡಿದ ಜನರಿಗೆ ಅಕ್ಕಿ ವಿತರಿಸಲು ಅಧಿಕಾರಿಗಳು ಆದಾರ್ ಕಾರ್ಡ್ ಕೇಳುತ್ತಿದ್ದಾರೆ. ರಾಜ್ಯದ ಯಡಿಯೂರಪ್ಪನವರ ಸರ್ಕಾರ ಇದ್ಯಾವುದು ತನಗೆ ಸಂಬಂಧವಿಲ್ಲ ಎಂಬಂತೆ ವರ್ಗಾವಣೆ ದಂದೆಯಲ್ಲಿ ತೊಡಗಿದ್ದಾರೆ. ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಇಂತಹ ಜನ ವಿರೋದಿ ಸರ್ಕಾರಗಳು ಸ್ವಾತಂತ್ರ್ಯ ನಂತರ ಹಿಂದೆಂದೂ ಆಡಳಿತ ನಡೆಸಿದ ಉದಾಹರಣೆ ಇಲ್ಲ ಎಂದು ಕಾಂಗ್ರೆಸ್ ಆಕ್ರೋಷ ವ್ಯಕ್ತಪಡಿಸಿದೆ.

ಪ್ರತಿಭಟನೆಯಲ್ಲಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಬಿ ಹಿರಿಯಣ್ಣ, ಕೆಪಿಸಿಸಿ ಐ.ಟಿ ಸೆಲ್ ಪ್ರದಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ನಗರ ಪ್ರಾಧಿಕಾರದ ಮಾಜಿ ಅದ್ಯಕ್ಷ ವಿಕಾಸ್ ಹೆಗ್ಡೆ, ಬ್ಲಾಕ್ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿಗಳಾದ ವಿನೋದ್ ಕ್ರಾಸ್ಟೋ, ಖಜಾಂಚಿ ಕೋಣಿ ನಾರಾಯಣ ಆಚಾರ್, ಅಟೋ ರಿಕ್ಷಾ, ಕಾರು, ಮೆಟಾಡೋರ್ ಚಾಲಕ ಮಾಲಕರ ಸಂಘದ ಅಧ್ಯಕ್ಷ ಲಕ್ಷಣ ಶೆಟ್ಟಿ, ಪುರಸಭಾ ಸದಸ್ಯರಾದ ಪ್ರಬಾವತಿ ಶೆಟ್ಟಿ, ಕೆ.ಜಿ ನಿತ್ಯಾನಂದ, ಶ್ರೀದರ ಶೇರೆಗಾರ, ಚಂದ್ರಶೇಖರ ಖಾರ್ವಿ, ಅಬು ಮಹಮ್ಮದ್, ಕೇಶವ ಭಟ್, ಮಹಿಳಾ ಕಾಂಗ್ರೆಸ್ ಅದ್ಯಕ್ಷೆ ಜ್ಯೋತಿ ಪುತ್ರನ್, ಯುವ ಕಾಂಗ್ರೆಸ್ ಅದ್ಯಕ್ಷ ಇಚ್ಚಿತ್ ಶೆಟ್ಟಿ, ವಕ್ವಾಡಿ ರಮೇಶ್ ಶೆಟ್ಟಿ, ಜ್ಯೋತಿ ನಾಯ್ಕ್, ಜ್ಯೋತಿ ಮೊಗವೀರ, ಆಶಾ ಕರ್ವಾಲೋ, ಕೋಡಿ ಸುನಿಲ್ ಪೂಜಾರಿ, ರೋಷನ್ ಶೆಟ್ಟಿ, ಅಣ್ಣಯ್ಯ ಪುತ್ರನ್ ಮುಂತಾದವರು ಬಾಗವಹಿಸಿದರು.

Comments are closed.