ಮನೋರಂಜನೆ

ಇಟಲಿಯ ಫಿಲ್ಮ್ ಫೆಸ್ಟಿವಲ್ ಗೆ ಇಂಡಿಯಾದಿಂದ ಏಕೈಕ ಸ್ಯಾಂಡಲ್’ವುಡ್’ ನಿರ್ದೇಶಕ ಆಯ್ಕೆ!

Pinterest LinkedIn Tumblr


ಸ್ಯಾಂಡಲ್’ವುಡ್’ನಲ್ಲಿ ಕೇವಲ 2 ಚಿತ್ರಗಳನ್ನು ನಿರ್ದೇಶಿಸಿದ್ದ ಲೋಹಿತ್ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.

ಹೊಸ ಅಲೆಯ ಚಿತ್ರಗಳಾದ ‘ಮಮ್ಮಿ’ ಹಾಗೂ ‘ದೇವಕಿ’ ಸಿನಿಮಾಗಳನ್ನು ಲೋಹಿತ್ ನಿರ್ದೇಶಿಸಿದ್ದರು. ಗಾಂಧಿನಗರದ ಉದಯೋನ್ಮುಖ ಸಿನಿಮಾ ಮೇಕರ್ ಇದೀಗ ಇಟಲಿಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಒನಿರೋಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದಾರೆ.

ಇಂತಹ ಚಿತ್ರೋತ್ಸವದಲ್ಲಿ ಎಂಟ್ರಿ ಪಡೆದುಕೊಳ್ಳುವುದು ದೊಡ್ಡ ವಿಷಯವೇ ಸರಿ. ಹೀಗಿರುವಾಗ, ಸಾಕಷ್ಟು ಸ್ಪರ್ಧೆಯ ನಡುವೆ ಲೋಹಿತ್ ಅಂತಿಮ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಒನಿರೋಸ್ ಪಟ್ಟಿಯಲ್ಲಿ ದೇಶ ವಿದೇಶದ ಗಣ್ಯಾತಿಗಣ್ಯರ ನಿರ್ದೇಶಕರ ಜೊತೆ ಕನ್ನಡದ ಬಾವುಟ ಹಾರಿಸಿರುವ ಲೋಹಿತ್ ಎಲ್ಲರ ಹುಬ್ಬೆರಿಸುವಂತೆ ಮಾಡಿದ್ದಂತು ನಿಜ. ಮತ್ತೊಂದು ವಿಶೇಷವೆಂದರೆ ಈ ಚಿತ್ರೋತ್ಸವದಲ್ಲಿ ಆಯ್ಕೆಯಾದ ಭಾರತದ ಏಕೈಕ ನಿರ್ದೇಶಕ ಎನ್ನುವ ಹಿರಿಮೆ ಇವರದು.

ಚಿತ್ರೋತ್ಸವದಲ್ಲಿ ಅಂತಿಮ ಹಂತಕ್ಕೆ ಆಯ್ಕೆಯಾದ ಎಲ್ಲ ನಿರ್ದೇಶಕರನ್ನು ವಿಜೇತರ ರೀತಿಯೆ ಪರಿಗಣಿಸಲಾಗುತ್ತದೆ. ಹೀಗಾಗಿ ಲೋಹಿತ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಬಹುತೇಕ ಗೆಲುವಿನ ದಡ ಮುಟ್ಟಿದ್ದಾರೆ. ಟ್ರೋಫಿಗೆ ಮುತ್ತಿಡುವುದೊಂದು ಬಾಯಿಯಿದೆ ಅಷ್ಟೆ.

Comments are closed.